ಸತ್ಯರಾಜ್ ಹೇಳಿಕೆಗೂ ಚಿತ್ರಕ್ಕೂ ಸಂಬಂಧವಿಲ್ಲ; ನಮ್ಮ ಶ್ರಮ ಬೆಂಬಲಿಸಿ ಚಿತ್ರ ನೋಡಿ- ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಮನವಿ….

0
1097
Satyaraj- statement -not related –film- Please -support -Rajamuouli

ಚೆನ್ನೈ,ಏ,2017(www.justkannada.in):  ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಟ್ಟಪ್ಪ ಪಾತ್ರದಾರಿ ನಟ ಸತ್ಯರಾಜ್ ನೀಡಿರುವ ಹೇಳಿಕೆ ಖಂಡಿಸಿ ಬಾಹುಬಲಿ-2 ಚಿತ್ರ ಬಿಡುಗಡೆಗೆ ವಿರೋಧಿಸಿ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿರುವ ಬೆನ್ನಲ್ಲೆ  ಈ ಕುರಿತು ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಸ್ಪಷ್ಟನೆ ನೀಡಿದ್ದಾರೆ.Satyaraj- statement -not related –film- Please -support -Rajamuouli

ನಟ ಸತ್ಯರಾಜ್ ಹೇಳಿಕೆಗೂ ಬಾಹುಬಲಿ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ನಮ್ಮ ಶ್ರಮವನ್ನು ಬೆಂಬಲಿಸಿ ಬಾಹುಬಲಿ ಚಿತ್ರವನ್ನು ನೋಡಿ. ಬಾಹುಬಲಿ ಮೊದಲ ಭಾಗವನ್ನು ಪ್ರೀತಿಯಿಂದ ವೀಕ್ಷಿಸಿದ್ದೀರಿ. ಅದೇ ರೀತಿ ಬಾಹುಬಲಿ 2 ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಕನ್ನಡಿಗರಲ್ಲಿ ನಿರ್ದೇಶಕ ರಾಜಮೌಳಿ ಮನವಿ ಮಾಡಿ  ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ನಟ ಸತ್ಯರಾಜ್  9 ವರ್ಷಗಳ ಹಿಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡಿದ ನಂತರ ಕರ್ನಾಟಕದಲ್ಲಿ ಸಾಕಷ್ಟು ಚಿತ್ರಗಳು ತೆರೆ ಕಂಡಿವೆ. ಸತ್ಯರಾಜ್ ಹೇಳಿಕೆ ಅವರಿಗೆ ಮಾತ್ರ ಸೀಮಿತ.  ವೈಯಕ್ತಿಕ ಹೇಳಿಕೆಯಿಂದ ಸಮಸ್ಯೆ ಬೇಡ. ಚಿತ್ರತಂಡಕ್ಕೆ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ನಮ್ಮ ಶ್ರಮ ಬೆಂಬಲಿಸಿ ಎಂದು ರಾಜಮೌಳಿ ಮನವಿ ಮಾಡಿದ್ದಾರೆ.

 

Key words: Satyaraj- statement -not related –film- Please -support -Rajamuouli