1900125_652542184783125_171493462_nಬೆಂಗಳೂರು : ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿರುವ ಸಾಲುಮರದ ತಿಮ್ಮಕ್ಕ ಅವರನ್ನು ಭಾನುವಾರ ರಾತ್ರಿ 8.30 ರ ಸಮಯದಲ್ಲಿ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ಎರಡು ದಿನಗಳಿಂದ ತಿಮ್ಮಕ್ಕ ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿದ್ದರು. ಹಾಗಾಗಿ ತಿಮ್ಮಕ್ಕ ಅವರಿಗೆ ಹುಲಿಕ ಲ್ ಬಳಿಯಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೂ ಅವರ ಉಸಿರಾಟ ಕ್ರಿಯೆಯಲ್ಲಿ ಹೆಚ್ಚಿನ ಏರು ಪೇರು ಉಂಟಾಗಿತ್ತು.

ಅಲ್ಲದೇ, ಬೆನ್ನು ಮತ್ತು ಸೊಂಟದಲ್ಲಿಯೂ ನೋವು ಹೆಚ್ಚಾಗಿದ್ದರಿಂದ ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖ ಲಿಸಲಾಗಿದೆ ಎಂದು ತಿಮ್ಮಕ್ಕ ಅವರ ಮಗ ಉಮೇಶ್ ಮಾಧ್ಯಗಳಿಗೆ ತಿಳಿಸಿದ್ದಾರೆ.

ತಿಮ್ಮಕ್ಕ ಅವರ ಉಸಿರಾಟದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ತುರ್ತುನಿಘಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ತಿಮ್ಮಕ್ಕ ಸ್ಪಂದಿಸುತ್ತಿದ್ದು, ಸಧ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.

—————–