ಎಸ್ .ಪಿ ಬಾಲಸುಬ್ರಮಣ್ಯಂ ಅವರಿಗೆ ಸಂಗೀತ ನಿರ್ದೇಶಕ ಇಳಯರಾಜ ಲೀಗಲ್ ನೋಟಿಸ್

0
1085

ಚೆನ್ನೈ:ಮಾ-19:(www.justkannada.in)ಖ್ಯಾತ ಹಿನ್ನೆಲೆ ಗಾಯಕ ಎಸ್ .ಪಿ ಬಾಲಸುಬ್ರಮಣ್ಯಂ ಅವರಿಗೆ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ ಲೀಗಲ್ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿವಿಧೆಡೆ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ತಾವು ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಹಾಡದಂತೆ ಸಂಗೀತ ನಿರ್ದೇಶಕ ಇಳಯರಾಜ ಎಸ್ .ಪಿ ಬಾಲಸುಬ್ರಮಣ್ಯಂ, ಚಿತ್ರ ಮತ್ತು ಚರಣ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಸ್ವತ: ಎಸ್ ಪಿ ಬಾಲಸುಬ್ರಹ್ಮಣ್ಯಂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾವು ಸಂಗೀತ ಸಂಯೋಜಿಸಿರುವ ಗೀತೆಗಳನ್ನು ತಮ್ಮ ಅನುಮತಿಯಿಲ್ಲದೇ ಯಾವುದೇ ವೇದಿಕೆಗಳಲ್ಲಿ ಹಾಡುವಂತಿಲ್ಲ, ಒಂದು ವೇಳೆ ಹಾಡಿದರೇ, ಅದಕ್ಕೆ ದಂಡ ತೆರಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಎಸ್ ಪಿಬಿ, ಇಳಯರಾಜಾ ಅವರ ನೋಟಿಸ್ ಗೆ ಕಾನೂನಾತ್ಮಕವಾಗಿ ಉತ್ತರ ನೀಡಲಾಗಿದೆ. ಇನ್ನು ನನ್ನ ಮಗ ಚರಣ್ ಎಸ್ ಪಿಬಿ50 ಎಂಬ ಹೆಸರಿನಲ್ಲಿ ವರ್ಲ್ಡ್ ಟೂರ್ ಆಯೋಜಿಸಿದ್ದ, ರಷ್ಯಾ, ಲಂಕಾ, ಮಲೇಶಿಯಾ , ಸಿಂಗಾಪುರ್ ಮತ್ತು ದುಬೈ ಗಳಲ್ಲಿ ಈಗಾಗಲೇ ಸಂಗೀತ ಪ್ರದರ್ಶನ ನೀಡಿದ್ದೇವೆ. ಆಗಸ್ಟ್ ವಲ್ಲಿ ಟೊರಾಂಟೋದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಕಾರ್ಯಕ್ರಮವನ್ನು ರದ್ದುಗೊಳಿಸುವುದಿಲ್ಲ, ನಮ್ಮ ಸಂಗೀತ ಪಯಣ ಮುಂದುವರಿಯುತ್ತದೆ. ಬೇರೆ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡುವುದಾಗಿ ಹೇಳಿದ್ದಾರೆ.
S P Balasubrahmanyam, Ilayaraaja, Legal notice