ರಸ್ತೆ ಅಪಘಾತದಿಂದ ಪ್ರಾಣಿಗಳ ರಕ್ಷಣೆಗೆ ‘ಅಲರ್ಟ್’ ಟೆಕ್ನಾಲಜಿ ಸಂಶೋಧಿಸಿದ ಗುಜರಾತ್ ತಜ್ಞರು!

0
1072

ಅಹಮದಾಬಾದ್, ಏಪ್ರಿಲ್ 17 (www.justkannada.in): ರಸ್ತೆಗೆ ಅಡ್ಡವಾಗಿ ಬಂದು ಅಪಘಾತಕ್ಕೀಡಾಗಿ ಸಾವನ್ನಪ್ಪುವ ಪ್ರಾಣಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗುಜರಾತ್ ನ ತಜ್ಞರ ತಂಡ ಅಲರ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ!

ಹೌದು. ಅಲರ್ಟ್ ವ್ಯವಸ್ಥೆ ರಿಯಲ್ ಟೈಮ್ ನಲ್ಲಿ ರಸ್ತೆಯ ಮೇಲಿರುವ ಪ್ರಾಣಿಗಳ ಬಗ್ಗೆ ಕಾರಿನ ಚಾಲಕರಿಗೆ ಮಾಹಿತಿ ನೀಡಲಿದ್ದು, ರಸ್ತೆ ಅಪಘಾತದಲ್ಲಿ ಗೋವುಗಳು ಸೇರಿದಂತೆ ಹಲವು ಪ್ರಾಣಿಗಳು ಜೀವಕಳೆದುಕೊಳ್ಳುವುದಕ್ಕೆ ಸ್ವಲ್ಪ ಮಟ್ಟಿಗೆ ತಗ್ಗಿಸುತ್ತದೆ.

ಗುಜರಾತ್ ನ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ತಜ್ಞರು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಡಾಶ್ ಬೋರ್ಡ್ ನಲ್ಲಿ ಕ್ಯಾಮರಾ ಹಾಗೂ ಅಲ್ಗಾರಿದಮ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಮುಂದೆ ನಿಂತಿರುವ ಪ್ರಾಣಿಯ ಬಗ್ಗೆ ಮೊದಲೇ ಕಾರು ಚಾಲಕರಿಗೆ ಮಾಹಿತಿ ನೀಡುತ್ತದೆ. ಈ ಮೂಲಕ ರಸ್ತೆಗೆ ಅಡ್ಡವಾಗಿ ಬಂದು ಅಪಘಾತಕ್ಕೀಡಾಗಿ ಸಾವನ್ನಪ್ಪುವ ಪ್ರಾಣಿಗಳ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಿದೆ.