ಡೇರ್ ಡೆವಿಲ್ಸ್ ತಂಡಕ್ಕೆ ರಿಕಿ ಪಾಂಟಿಂಗ್ ಕೋಚ್ !

0
449

ಮುಂಬೈ, ಜನವರಿ 06 (www.justkannada.in): 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಫ್ರಾಂಚೈಸಿ ಡೆಲ್ಲಿ ಡೇರ್ ಡೆವಿಲ್ಸ್ ತನ್ನ ತಂಡದ ಕೋಚ್ ಆಗಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಆಯ್ಕೆ ಮಾಡಿದೆ.

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಿಇಒ ಹೇಮಂತ್ ದುವಾ ಅವರು ತಂಡದ ಕೋಚ್ ಆಗಿ ಮೂರು ಬಾರಿ ವಿಶ್ವಕಪ್ ವಿಜೇತ ತಂಡದ ಆಟಗಾರ ರಿಕಿ ಪಾಂಟಿಂಗ್ ರನ್ನು ಆಯ್ಕೆ ಮಾಡಲಾಗಿದೆ ಎಂದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಸಂಘರ್ಷದ ನಿಬಂಧನೆಗಳ ಕಾರಣದಿಂದಾಗಿ ಹಿಂದಿನ ಋತುವಿನ ನಂತರ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು.

ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ಆರೋಪ ಹಿನ್ನೆಲೆಯಲ್ಲಿ ಡೆಲ್ಲಿ ತಂಡದ ಕೋಚ್ ಹುದ್ದೆ ತೊರೆದು ಭಾರತ ‘ಎ’ ಮತ್ತು ಅಂಡರ್-19 ತಂಡದ ಕೋಚ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು.