ಇಬ್ಬರು ಯೋಧರ ಸಾವಿಗೆ ಪ್ರತಿಕಾರ: ಮೂವರು ಉಗ್ರರನ್ನ ಹೊಡೆದುರುಳಿಸಿದ ಭಾರತೀಯ ಸೇನೆ….

0
239
Revenge -death - two warriors- Indian Army -shot down- three terrorist

ಜಮ್ಮು ಕಾಶ್ಮೀರ,ಆ,13,2017(www.justkannada.in); ಮೂವರು ಉಗ್ರರನ್ನ ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆ ಜಮ್ಮು-ಕಾಶ್ಮೀರದ ಶೋಪಿಯಾನದಲ್ಲಿ ಇಬ್ಬರು ಯೋಧರ ಸಾವಿಗೆ ಪ್ರತಿಕಾರ ತೀರಿಸಿಕೊಂಡಿದೆ.Revenge -death - two warriors- Indian Army -shot down- three terrorist

ಇಂದು ಬೆಳಿಗ್ಗೆ ಇಬ್ಬರು ಶೋಪಿಯಾನದಲ್ಲಿ ಉಗ್ರರ ವಿರುದ್ದದ ಕಾರ್ಯಾಚರಣೆ ವೇಳೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದೀಗ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆ ಯೋಧರ ಸಾವಿಗೆ ಪ್ರತೀಕಾರವಾಗಿ ಮೂವರು ಭಯೋತ್ಪಾದಕರನ್ನ  ಹೊಡೆದುರುಳಿಸಿದೆ.

ಜಮ್ಮು ಕಾಶ್ಮೀರದ ಅನ್ವೀರ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ನಿನ್ನೆ ರಾತ್ರಿ ಮಾಹಿತಿ ಸಿಕ್ಕಿತ್ತು. ತಕ್ಷಣ ರಾತ್ರಿಯೇ ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದರಲ್ಲಿ ಇಬ್ಬರು ಯೋಧರು ಸಾವನ್ನಪ್ಪಿ, ಇತರ ಮೂವರು ಯೋಧರು ಗಾಯಗೊಂಡಿದ್ದರು.

ಇದಕ್ಕೆ ಪ್ರತೀಕಾರವಾಗಿ ಭದ್ರತಾ ಸಿಬ್ಬಂದಿಯು ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದು ಮೂವರನ್ನು ಹೊಡೆದುರುಳಿಸಿದ್ದಾರೆ. ಹತ ಉಗ್ರರ ಶವಗಳನ್ನೂ ಭದ್ರತಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.

key words:Revenge -death – two warriors- Indian Army -shot down- three terrorist