ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ-ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿಕೆ…

0
147
request-hold-elections-all-constituencies-state-state-election-officer-sanjeev-kumar

ಬೆಂಗಳೂರು, ಜನವರಿ 12,2018(www.justkannada.in): ರಾಜ್ಯ ಎಲ್ಲಾ ಕ್ಷೇತ್ರಗಳಿಗೂ  ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.request-hold-elections-all-constituencies-state-state-election-officer-sanjeev-kumar

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜೀವ್ ಕುಮಾರ್.  ಅವರು ಒಂದೇ ಹಂತದಲ್ಲಿ ಚುನಾವಣೆ ನಡೆದರೂ ಯಾವುದೇ ಸಮಸ್ಯೆ ಆಗದಂತೆ ನಿರ್ವಹಿಸುವ ಸಾಮರ್ಥ್ಯ ಇದೆ, 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸುವಂತೆ ರಾಜಕೀಯಪಕ್ಷಗಳು ಮನವಿ ಮಾಡಿವೆ. ಕಳೆದ ಬಾರಿಯೂ ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು,  ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಶೀಘ್ರವಾಗಿ ನಿರ್ಧಾರ ಹೊರಬೀಳುತ್ತದೆ ಎಂದರು.

ಮತಪಟ್ಟಿ ಪರಿಷ್ಕರಣೆಯ ಕೊನೆ ದಿನಾಂಕವನ್ನು ಜನವರಿ 22 ರವರೆಗೆ ವಿಸ್ತರಿಸಲಾಗಿದೆ. ನಂತರ ಪರಿಷ್ಕರಣ ಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ , ಮತದಾನ ಇವಿಎಂ ಯಂತ್ರದ ಮೂಲಕವೇ ಆಗಲಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

 

Key words: Request – hold elections -all  constituencies –state- State Election Officer -Sanjeev Kumar