ಟ್ರೈ ಮಾಡಿ, ಮಶ್ರೂಮ್ ಆಮ್ಲೇಟ್ ರೆಸಿಪಿ

0
713

ಬೇಕಾಗುವ ಸಾಮಾಗ್ರಿಗಳು :

ಎಣ್ಣೆ 3 ಚಮಚ
ಹಸಿ ಮೆಣಸಿನಕಾಯಿ 1
ಶುಂಠಿ 1 ಚಮಚ(ಚಿಕ್ಕದಾಗಿ ಕತ್ತರಿಸಿದ್ದು)
ಅಣಬೆ 6-7
ಈರುಳ್ಳಿ 1- 2
ಮೊಟ್ಟೆ 6
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸು 2 -3

ತಯಾರಿಸುವ ವಿಧಾನ:
* ಒಂದು ಬಟ್ಟಲಿಗೆ ಮೊಟ್ಟೆ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಕದಡಿ.
* ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಳ್ಳೆ ಎಣ್ಣೆ ಹಾಕಿ ಚಿಕ್ಕದಾಗಿ ಕತ್ತರಿಸಿದ ಅಣಬೆ ಹಾಕಿ, ಅಣಬೆ ಬೇಯುವವರೆಗೆ ಫ್ರೈ ಮಾಡಿ, ಆ ಅಣಬೆಯನ್ನು ಕದಡಿದ ಮೊಟ್ಟೆಯಲ್ಲಿ ಹಾಕಿ ಮತ್ತೊಮ್ಮೆ ಚೆನ್ನಾಗಿ ಕದಡಿ.
* ನಂತರ ತವಾಕ್ಕೆ ಎಣ್ಣೆ ಹಾಕಿ ಈ ಮೊಟ್ಟೆಯ ಮಿಶ್ರಣವನ್ನು ಹಾಕಿ ತವಾವನ್ನು ಪಾತ್ರೆಯಿಂದ ಮುಚ್ಚಿ, ಸಾಧಾರಣ ಉರಿಯಲ್ಲಿ 5 ನಿಮಿಷ ಬೇಯಿಸಿ, ನಂತರ ಅದನ್ನೊಮ್ಮೆ ಮಗುಚಿ ಹಾಕಿ. ಈ ರೀತಿ ಮಾಡಿದರೆ ಮಶ್ರೂಮ್ ಆಮ್ಲೇಟ್ ರೆಡಿ.
6 ಮೊಟ್ಟೆಯಿಂದ 3 ಆಮ್ಲೇಟ್ ಮಾಡಬಹುದು.