ಕಾರ್ನ್ ಪ್ಯಾನ್ ಕೇಕ್ ರೆಸಿಪಿ

0
421

ಬೇಕಾಗುವ ಸಾಮಾಗ್ರಿಗಳು :
ಜೋಳ 1 ಕಪ್
ಅಕ್ಕಿ ಹಿಟ್ಟು 2 ಕಪ್
ಹೂಕೋಸು 1
ಬಟಾಣಿ ಅರ್ಧ ಕಪ್
ಚೀಸ್ 100 ಗ್ರಾಂ
ಎಣ್ಣೆ 2 ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ 1 ಚಮಚ
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:
* ಮೊದಲಿಗೆ ಹಿಟ್ಟಿಗೆ ನೀರು ಹಾಕಿ ಕಲೆಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿ ಅರ್ಧ ಗಂಟೆ ಕಾಲ ಇಡಿ.
* ಜೋಳ, ಹೂಕೋಸು, ಬಟಾಣಿಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ,
* ನಂತರ ಅವುಗಳಿಗೆ ಹಸಿ ಮೆಣಸಿನಕಾಯಿ ಪೇಸ್ಟ್ , ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ, 2 ಸೌಟ್ ಹಿಟ್ಟನ್ನು ಹಾಕಿ, ಹಿಟ್ಟು ಅರ್ಧ ಬೆಂದಾಗ ಬೇಯಿಸಿ ಜೋಳ ಮತ್ತು ತರಕಾರಿಯನ್ನು ಹಾಕಿ , ನಂತರ ಚೀಸ್ ಅನ್ನು ಉದುರಿಸಿ, ಮತ್ತೆ 2 ನಿಮಿಷ ಬೇಯಿಸಿ ಉರಿಯಿಂದ ಇಳಿಸಿ.
* ಈ ರೀತಿ ಉಳಿದ ಹಿಟ್ಟಿನಿಂದ ಪ್ಯಾನ್ ಕೇಕ್ ತಯಾರಿಸಿ. ರೆಡಿಯಾದ ಕಾರ್ನ್ ಅನ್ನು ಟೊಮೆಟೊ ಚಟ್ನಿ, ಟೊಮೆಟೊ ಸಾಸ್ ಅಥವಾ ಗಾರ್ಲಿಕ್ ಸಾಸ್ ಜೊತೆ ಸವಿಯಿರಿ.