ಭೇಲ್ ಪುರಿ ಸ್ಯಾಂಡ್‌ವಿಚ್ ಬಲು ರುಚಿ

0
406

ಅಗತ್ಯವಿರುವ ಸಾಮಾಗ್ರಿಗಳು:
*ಮಂಡಕ್ಕಿ: ನೂರು ಗ್ರಾಂ
*ಈರುಳ್ಳಿ: ಒಂದು (ಚಿಕ್ಕದಾಗಿ ಹೆಚ್ಚಿದ್ದು)
*ಟೊಮೇಟೊ: ಒಂದು (ಚಿಕ್ಕದಾಗಿ ಹೆಚ್ಚಿದ್ದು)
*ಆಲುಗಡ್ಡೆ: ಒಂದು (ಬೇಯಿಸಿ, ಚಿಕ್ಕದಾಗಿ ಕತ್ತರಿಸಿದ್ದು)
*ಕ್ಯಾರೆಟ್ : ಒಂದು (ತುರಿದದ್ದು)
*ಪುದಿನಾ ಚಟ್ನಿ: ಒಂದು ದೊಡ್ಡ ಚಮಚ
*ಉಪ್ಪು: ರುಚಿಗನುಸಾರ
*ಲಿಂಬೆರಸ: ಅಗತ್ಯಕ್ಕನುಸಾರ
*ಸೇವ್ ಪುರಿ: ಅಲಂಕಾರಕ್ಕೆ ಅಗತ್ಯವಿದ್ದಷ್ಟು
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು, ದಂಟು ನಿವಾರಿಸಿ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿದ್ದು

ಪುದಿನಾ ಚಟ್ನಿ ತಯಾರಿಸಲು:
*ಪುದಿನಾ ಎಲೆಗಳು: ಒಂದು ಕಟ್ಟು
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು
*ಹಸಿಮೆಣಸು: ಚಿಕ್ಕದಾದರೆ ಎರಡು, ದೊಡ್ಡದಾದರೆ ಒಂದು ಉದ್ದಕ್ಕೆ ಸೀಳಿದ್ದು
ಸ್ಯಾಂಡ್ವಿಚ್ ಬ್ರೆಡ್: ಹತ್ತು ಹೋಳುಗಳು (ಬನ್ ಆದರೂ ಸರಿ)

ಮಾಡುವ ವಿಧಾನ:
1) ಮೊದಲು ಪುದಿನಾ ಚಟ್ನಿಯನ್ನು ತಯಾರಿಸಿಕೊಳ್ಳಿ. ಇದಕ್ಕಾಗಿ ಪುದಿನಾ ಎಲೆ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ನಯವಾಗಿ ಮಿಕ್ಸಿಯಲ್ಲಿ ಅರೆಯಿರಿ. ಅರೆಯುವಾಗ ಕೊಂಚ ನೀರು ಮತ್ತು ಉಪ್ಪನ್ನು ಸೇರಿಸಿ.
2) ಚಟ್ನಿ ತಯಾರಿಸಿದ ಬಳಿಕ ಬದಿಗೆ ತೆಗೆದಿಡಿ. ಇದು ಬ್ರೆಡ್ ಹೋಳುಗಳಿಗೆ ಸವರಲು ಅಗತ್ಯವಿದೆ.
3) ಒಂದು ಪಾತ್ರೆಯಲ್ಲಿ ಎಲ್ಲಾ ತರಕಾರಿ, ಈರುಳ್ಳಿ, ಆಲುಗಡ್ಡೆ, ಟೊಮೇಟೋ, ಕ್ಯಾರೆಟ್ ಮತ್ತು ಮಂಡಕ್ಕಿ ಸೇರಿಸಿ ಚೆನ್ನಾಗಿ ಕಲಸಿ.
4) ಈ ಪಾತ್ರೆಗೆ ಒಂದು ದೊಡ್ಡ ಚಮಚ ಪುದಿನಾ ಚಟ್ನಿ, ಲಿಂಬೆರಸ, ಉಪ್ಪು ಸೇರಿಸಿ ದೊಡ್ಡ ಚಮಚ ಬಳಸಿ ಕಲಸಿ
5) ಇದಕ್ಕೆ ಸೇವ್ ಪುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕಲಸಿ.
6) ಈಗ ಸಾಂಡ್ವಿಚ್ ತಯಾರಿಸಲು ಒಂದು ಹೋಳು ಬ್ರೆಡ್‌ನ ಒಂದು ಭಾಗಕ್ಕೆ (ಅಥವಾ ಬನ್‌ನ ಒಳಭಾಗ) ಕೊಂಚ ಚಟ್ನಿ ಸವರಿ.
7) ಸವರಿದ ಹೋಳಿನ ಮೇಲೆ ಭೇಲ್ ಪುರಿಯನ್ನು ದಪ್ಪನಾಗಿ ಹರಡಿ.
8) ಈಗ ಇನ್ನೊಂದು ಹೋಳನ್ನು ಇದರ ಮೇಲಿರಿಸಿ. ರುಚಿಯಾದ ಭೇಲ್ ಪುರಿ ಸ್ಯಾಂಡ್ವಿಚ್ ಈಗ ತಯಾರಾಗಿದೆ. ಇದನ್ನು ಹಸಿರು ಚಟ್ನಿಯೊಂದಿಗೆ ಆಸ್ವಾದಿಸಿ.