ಹೈದರಾಬಾದ್,ಮಾ,16,2017(www.justkannada.in):  ಬಹು ನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಬಿಡುಗಡೆಯಾದ ಕೆಲ ನಿಮಿಷಗಳಲ್ಲೇ ಹಲವು ಜನ ವೀಕ್ಷಿಸಿದ್ದಾರೆ.

ಹೈದರಾಬಾದ್‌ನಲ್ಲಿ ತೆಲುಗು ಟ್ರೇಲರ್ ರಿಲೀಸ್  ಆಗಿದ್ದು, ಪ್ರಭಾಸ್,ರಾನಾ ಮತ್ತಿತರರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಿತ್ರದ ಟ್ರೈಲರ್ 1.54 ನಿಮಿಷಗಳಷ್ಟಿದ್ದು,  ಕಟ್ಟಪ್ಪ ಬಾಹುಬಲಿಯನ್ನು ಇರಿದು ಸಾಯಿಸುವ ದೃಶ್ಯವೂ ಇದೆ. ಆದರೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಸಾಯಿಸಿದ ಎಂಬುದು ಸಸ್ಪೆನ್ಸ್‌ ಆಗಿಯೇ ಉಳಿದಿದೆ.

ಇನ್ನು ಒಂದೆರಡು ದಿನಗಳಲ್ಲಿ ಟ್ರೇಲರ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಬಾಹುಬಲಿ- 2 ಚಿತ್ರ ಏಪ್ರಿಲ್‌ನಲ್ಲಿ ರಿಲೀಸ್ ಆಗಲಿದೆ.

Key words: Release- trailer -film Bahubali -2