ಕೆಂಪು ಲೈಟ್ ತಗೆದು ಹಾಕಿದ ವಿಚಾರ; ಮೋದಿ ಮೊದಲು ಸೆಕ್ಯೂರಿಟಿ ತೆಗೆದು ಹಾಕಲಿ ಎಂದ ಸಚಿವ ಬಸವರಾಜ ರಾಯರೆಡ್ಡಿ….

0
464
Red light- Narendra Modi -over -security -minister Basavaraja Rayareddi

ಕೊಪ್ಪಳ,ಏ,21,2017(www.justkannada.in): ಕೆಂಪು ಲೈಟ್ ತಗೆದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ವೇಳೆ  ಮೊದಲು ಮೋದಿ ಅವರು ಸೆಕ್ಯೂರಿಟಿ ತೆಗೆದು ಹಾಕಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ  ಹೇಳಿದರು.Red light- Narendra Modi -over -security -minister Basavaraja Rayareddi

ಕೊಪ್ಪಳದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವಬಸವರಾಜರಾಯರೆಡ್ಡಿ, ನನಗೇನು ಲೈಟು ಹೋಗಿದ್ದಕ್ಕೆ ಡಿಫರೆನ್ಸ್ ಇಲ್ಲ. ನಾನು ಸೆಕ್ಯೂರಿಟಿ ತೆಗೆದು ಹಾಕಿ ಎಂದು ಮೋದಿಗೆ ಹೇಳುತ್ತನೆ. ಮೋದಿಯವರು ನಿಜವಾಗಿಯೂ ಮಾಡಬೇಕಾಗಿದ್ದು ಸೆಕ್ಯೂರಿಟಿ ತಗೆದುಹಾಕಬೇಕು ಎಂದು ತಿಳಿಸಿದರು.

ಮೋದಿಗೆ ಜೀವ ಬೆದರಿಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆ ಉತ್ತರಿಸಿದ ಉಡಾಫೆ ಉತ್ತರ ನೀಡಿದ ಬಸವರಾಜ ರಾಯರೆಡ್ಡಿ, ಅಧಿಕಾರ ಬೇಕಂದ್ರೆ ಸಾಯಬೇಕು. ಅಧಿಕಾರ ಬೇಡಾ ಅಂದ್ರೆ ಮನೆಯಲ್ಲಿ ಕೂರಬೇಕು. ಮೋದಿ ಮಾಡ್ತುರೋದು ಕೇವಲ ಶೋ ಆಫ್ ಬ್ಯೂಸಿನೆಸ್. ಜೀವ ಭಯ ಇದ್ರೆ ಸಾರ್ವಜನಿಕರ ಜೀವನಕ್ಕೆ ಬರಬಾರದು. ಅಕ್ಕಮಹಾದೇವಿ ವಚನ ಹೇಳಿದಂತೆ ಸಂತೆಯಲ್ಲಿ ಮನೆ ಮಾಡಿದ್ರೆ ಗದ್ದಲಕ್ಕೆ ಅಂಜಿದರೇ ಸರಿಯೆ ಎಂದರು.

Key words: Red light- Narendra Modi -over -security -minister Basavaraja Rayareddi