ದರ್ಶನ್ 51ನೇ ಚಿತ್ರಕ್ಕೆ ರಶ್ಮಿಕಾಗೆ ಸಿಕುತ್ತಾ ಚಾನ್ಸ್ ?!

0
405

ಬೆಂಗಳೂರು, ಜನವರಿ 11 (www.justkannada.in): ರಶ್ಮಿಕಾ ಮದ್ದಣ್ಣ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್’ವುಡ್ ನಲ್ಲಿ ಹರಿದಾಡುತ್ತಿದೆ.

ದರ್ಶನ್ ಅವರ 51ನೇ ಚಿತ್ರವನ್ನು ಪೊನ್ ಕುಮಾರ್ ನಿರ್ದೇಶಿಸಲಿದ್ದು, ಶೈಲಜಾ ನಾಗ್ ಮತ್ತು ಸುರೇಶ್ ಬಿ ನಿರ್ಮಾಣ ಮಾಡಲಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದು, ಒಬ್ಬ ನಾಯಕಿ ಪಾತ್ರಕ್ಕೆ ರಶ್ಮಿಕಾ ಜೊತೆ ಚಿತ್ರ ನಿರ್ಮಾಪಕರ ತಂಡ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ನಟಿ ರಚಿತಾ ರಾಮ್ ಜೊತೆಗೆ ಕೂಡ ಮಾತುಕತೆ ನಡೆಸಲಾಗುತ್ತಿದೆ ಎಂದು ಹಲವು ದಿನಗಳಿಂದ ಸುದ್ದಿ ಕೇಳಿಬರುತ್ತಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆಯಿಟ್ಟಿಲ್ಲ. ಆದರೂ ನಿರ್ಮಾಪಕರು ಚಿತ್ರದ ನಾಯಕಿಯರ ಪಾತ್ರದ ಬಗ್ಗೆ ಇನ್ನೂ ಖಚಿತ ಮಾಹಿತಿ ನೀಡಿಲ್ಲ.

ವಾಸ್ತವವಾಗಿ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರ ಮನಸ್ಸಿನಲ್ಲಿ ಹತ್ತಾರು ನಾಯಕಿಯರ ಹೆಸರುಗಳಿವೆಯಂತೆ. ನಟ-ನಟಿಯರ ಜೊತೆ ಒಪ್ಪಂದ ಆದ ನಂತರವೇ ಔಪಚಾರಿಕವಾಗಿ ಚಿತ್ರತಂಡ ನಾಯಕಿಯರ ಹೆಸರುಗಳನ್ನು ಬಹಿರಂಗಪಡಿಸಲಿದೆ. ಪೊನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಚಿತಾ ರಾಮ್ ನಾಯಕಿಯರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.