ಲಂಡನ್:ಏ-20:(www.justkannada.in)ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರವಿರುವ ಅಪರೂಪದ ನಾಲ್ಕು ಸ್ಟ್ಯಾಂಪ್ ಗಳನ್ನು ಬ್ರಿಟನ್ ನಲ್ಲಿ ಹರಾಜು ಹಾಕಲಾಗಿದ್ದು, 500,000 ಪೌಂಡ್ ಗಳಿಗೆ ಹರಾಜಾಗಿದೆ.

ಈ ವರೆಗೂ ಬಿಕರಿಯಾಗಿರುವ ಭಾರತೀಯ ಸ್ಟ್ಯಾಂಪ್ ಗಳಲ್ಲೇ ಅತ್ಯಂತ ಹೆಚ್ಚು ಮೊತ್ತಕ್ಕೆ ಹರಾಜಾದ ಸ್ಟ್ಯಾಂಪ್ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದು, ಆಸ್ಟ್ರೇಲಿಯಾದ ಖಾಸಗಿ ಕಲೆಕ್ಟರ್ ಒಬ್ಬರು ಇದನ್ನು ಖರೀದಿಸಿದ್ದಾರೆ.

ಮಹಾತ್ಮ ಗಾಂಧಿ ಅವರ ನಾಲ್ಕು ಸೆಟ್ ಗಳು ರಾಣಿ ಎಲಿಜಾಬೆತ್ II ಅವರಿಗೆ ಸೇರಿದ್ದ ರಾಯಲ್ ಅಂಚೆ ಚೀಟಿಗಳ ಸಂಗ್ರಹವಾಗಿದ್ದು, ವಿಶ್ವದ ಅತಿ ದೊಡ್ಡ ಹಾಗೂ ಅತ್ಯಂತ ಹೆಚ್ಚು ಮೌಲ್ಯಯುತವಾದ ಸಂಗ್ರಹದಲ್ಲಿ ಸಿಕ್ಕಿರುವ ಸ್ಟ್ಯಾಂಪ್ ಗಳಾಗಿವೆ, ಇತ್ತೀಚೆಗಷ್ಟೇ ಭಾರತದ ನಾಲ್ಕು ಆಣೆಯ ಸ್ಟ್ಯಾಂಪ್ ಗಳು ಹರಾಜಿನಲ್ಲಿ ಬಿಕರಿಯಾಗಿತ್ತು ಎಂದು ಬ್ರಿಟನ್ ಹೇಳಿದೆ.

Rare Indian stamps,Mahatma Gandhi, sold at record price,British