ರಾಂಚಿ ಟೆಸ್ಟ್: ಮುರಳಿ ವಿಜಯ್ ಅರ್ಧ ಶತಕ, ಆಸಿಸ್’ಗೆ ಟೀಂ ಇಂಡಿಯಾ ತಿರುಗೇಟು

0
1506

ರಾಂಚಿ, ಮಾರ್ಚ್ 18 (www.justkannada.in): ಮೂರನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ತಂಡ ಗಳಿಸಿರುವ ಬೃಹತ್ ಮೊತ್ತಕ್ಕೆ ಟೀಂ ಇಂಡಿಯಾ ಉತ್ತಮವಾಗಿ ತಿರುಗೇಟು ನೀಡುತ್ತಿದೆ.

ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಬಾರ್ಡರ್‌–ಗಾವಸ್ಕರ್‌’ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ತಂಡ 137.3 ಓವರ್‌ಗಳಲ್ಲಿ 451 ರನ್ ಕಲೆ ಹಾಕಿತು. ಭಾರತ ಎರಡನೇ ದಿನದಾಟದಲ್ಲಿ 40 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 120 ರನ್ ಗಳಿಸಿತ್ತು. ಸದ್ಯದ ಮಾಹಿತಿ ಪ್ರಕಾರ 69 ಓವರ್ ಗಳಲ್ಲಿ 189 ರನ್ ಗಳಿಸಿದೆ.

ಮುರಳಿ ವಿಜಯ್ ಅರ್ಧ ಶತಕ ಗಳಿಸಿದ್ದರೆ, ಚೇತೇಶ್ವರ ಪೂಜಾರ 33 ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದಾರೆ. ನಿನ್ನೆ ಕರ್ನಾಟಕದ ಕೆ.ಎಲ್. ರಾಹುಲ್ ಅರ್ಧ ಶತಕ ಗಳಿಸಿ ಔಟಾಗಿದ್ದರು. ನಾಲ್ಕು ಪಂದ್ಯಗಳ ಸರಣಿ ಇದಾಗಿದ್ದು ಉಭಯ ತಂಡಗಳು ತಲಾ ಒಂದರಲ್ಲಿ ಗೆಲುವು ಪಡೆದು ಸಮಬಲ ಸಾಧಿಸಿವೆ. ಆದ್ದರಿಂದ ಉಳಿದ ಎರಡೂ ಪಂದ್ಯಗಳು ಪ್ರಾಮುಖ್ಯತೆ ಪಡೆದಿವೆ.