ಬೀದರ್ ನಲ್ಲಿ ಹಳಿ ತಪ್ಪಿದ ರೈಲು; ಪ್ರಯಾಣಿಕರು ಅಪಾಯದಿಂದ ಪಾರು

0
448
Rails train

ಬೀದರ್‌,ಏ,21,2017(www.justkannada.in):  ಔರಂಗಾಬಾದ್‌‌-ಹೈದರಾಬಾದ್‌ ಪ್ಯಾಸೆಂಜರ್‌ ಟ್ರೈನ್‌ ಹಳಿ ತಪ್ಪಿ ಹಲವು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.Rails train

ಬೀದರ್ ನ ಕಾಳಗಾಪೂರ  ಬ್ರಿಜ್ ಬಳಿ ರೈಲಿನ ಎಂಜಿನ್ ಹಾಗೂ ಎರಡು ಬೋಗಿ  ಬೆಳಿಗ್ಗೆ ಮುಂಜಾನೆ ಹಳಿ ತಪ್ಪಿವೆ. ಎರಡೂ ಬೋಗಿಯಲ್ಲಿದ್ದ ಸುಮಾರು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಮಹಾರಾಷ್ಟ್ರದ ಔರಂಗಾಬಾದ್‌‌ನಿಂದ ತೆಲಂಗಾಣದ ಹೈದರಾಬಾದ್‌ಗೆ ರೈಲು ತೆರಳುತ್ತಿತ್ತು ಎಂದು ಹೇಳಲಾಗುತ್ತಿದೆ.

ಪೊಲೀಸರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

Key words: Rail -train – Bidar- Passengers –escape- danger