ಕಲಬುರಗಿ, ಫೆಬ್ರವರಿ 13,2018(www.justkannada.in):  ಐದನೂರು ಮತ್ತು ಸಾವಿರ ಮುಖ ಬೆಲೆಯ ನೋಟುಗಳನ್ನು ನಿಷೇಧ ಮಾಡುವ ಬಗ್ಗೆ ಐಡಿಯಾ ಕೊಟ್ಟಿದ್ದು ಆರ್ ಎಸ್ ಎಸ್ ನವರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.Rahul Gandhi -idea- note ban -given -RSS

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಕಲಬುರಗಿಯಲ್ಲಿ ಉದ್ಯಮಿಗಳ ಜೊತೆ ಸಂವಾದ ನಡೆಸಿದರು. ರಾಹುಲ್ ಗಾಂಧಿ ಅವರ 4 ದಿನದ ಪ್ರವಾಸ ಇಂದು ಅಂತ್ಯಗೊಳ್ಳಲಿದ್ದು, ಮಧ್ಯಾಹ್ನ ದೆಹಲಿಗೆ ಮರಳಲಿದ್ದಾರೆ.Rahul Gandhi -idea- note ban -given -RSS

ಉದ್ಯಮಿಗಳ ಜೊತೆ ಸಂವಾದ ನಡೆಸಿದ ರಾಹುಲ್ ಗಾಂಧಿ, ನೋಟು ನಿಷೇಧದ ಐಡಿಯಾ ಕೊಟ್ಟಿದ್ದು  ಆರ್ ಬಿಐ ಅಲ್ಲ, ಹಣಕಾಸು ಸಚಿವ ಅರುಣ್ ಜೇಟ್ಲಿಯೂ ಅಲ್ಲ. ಬದಲಾಗಿ ಆರ್ ಎಸ್ ಎಸ್ ನವರು. ಕೇಂದ್ರ ಸರ್ಕಾರ ಆರ್ ಎಸ್ ಎಸ್ ಸಿದ್ದಾಂತದಂತೆ ನಡೆಯುತ್ತಿದೆ. ಆರ್ ಎಸ್ ಎಸ್ ವಿಚಾರಗಳನ್ನು ಬಿಜೆಪಿಯವರು ಜಾರಿಗೊಳಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಪುನಾರಚನೆ ಮಾಡಲಾಗುತ್ತದೆ.  ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲ ವಿಫಲವಾಗಿದೆ. 50 ಸಾವಿರ ಉದ್ಯೋಗವನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ.. ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೃಷಿ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ನೆರೆಯ ದೇಶಗಳ ನಡುವೆ ಉತ್ತಮವಾದ ಬಾಂಧವ್ಯವಿಲ್ಲ ಎಂದು ಆರೋಪಿಸಿದರು.

ಜಿಎಸ್ಟಿ ಜಾರಿಗೆ ಬಂದ ಬಳಿಕ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಜಿಎಸ್ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್.  ಜಿಎಸ್ಟಿಯಲ್ಲಿ ಹಲವಾರು ದೋಷಗಳಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ಟಿಯನ್ನು ಪುನಾರಚನೆ ಮಾಡಲಾಗುತ್ತದೆ ಎಂದು ರಾಗಾ ಮುನ್ಸೂಚನೆ ನೀಡಿದರು.

 

Key words: Rahul Gandhi -idea- note ban -given -RSS