ಕೊರಿಯಾ ಸೂಪರ್ ಸಿರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಬ್ಯಾಂಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು…

0
2445
PV Sindhu- won - Korea Super Series- awards.

ಸಿಯೋಲ್, ಸೆ. 17,2017(www.justkannada.in): ಭಾರತದ  ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಕೊರಿಯಾ ಒಪನ್ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದಿದ್ದಾರೆ. PV Sindhu- won - Korea Super Series- awards.

ಇಂದು ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಜಪಾನಿನ ನಜೋಮಿ ಓಕುಹರ ರನ್ನ ಸೋಲಿಸುವ ಮೂಲಕ  ಕೊರಿಯಾ ಸೂಪರ್ ಸಿರೀಸ್ ಕಿರಿಟ ಮುಡಿಗೇರಿಸಿಕೊಂಡಿದ್ದಾರೆ. ನಾಲ್ಕನೇ ಸೀಡೆಡ್ ಪಿ.ವಿ. ಸಿಂಧು ಅವರು ಫೈನಲ್ ಪಂದ್ಯದಲ್ಲಿ ಜಪಾನಿನ ನೋಜೊಮಿ ಒಕುಹರಾ ವಿರುದ್ಧ 22-12, 11-21, 21-18 ರಲ್ಲಿ  ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಸಿಂಧುಗೆ ಇದು ಮೂರನೇ ಸೂಪರ್ ಸಿರೀಸ್ ಪ್ರಶಸ್ತಿಯಾಗಿದೆ.  ಜೊತೆಗೆ ಕೊರಿಯಾ ಓಪನ್ ಸೂಪರ್ ಸಿರೀಸ್‌ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಚೀನಾದ ಬಿಂಗ್ ಜಿವೊ ಅವರನ್ನು ಪಿ.ವಿ.ಸಿಂಧು 21-10, 17-21, 21-16 ಅಂತರದಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.

 

Key words: PV Sindhu- won – Korea Super Series- awards.