ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ ಈ ವಾರ ತೆರೆಗೆ: ಕುತೂಹಲ ಇಮ್ಮಡಿಗೊಳಿಸಿದ ಪುಷ್ಪಕ ವಿಮಾನ

0
156

pushpaka-vimanaಬೆಂಗಳೂರು:ಜ-5:(www.justkannada.in)ಹಲವಾರು ವಿಶೇಷತೆ, ನಿರೀಕ್ಷೆ, ಕುತೂಹಲಗಳನ್ನು ಮೂಡಿಸಿರುವ ನಟ-ನಿರ್ದೇಶಕ ರಮೇಶ್ ಅರವಿಂದ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರ ಪುಷ್ಪಕ ವಿಮಾನ ಜ.6ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಪುಷ್ಪಕ ವಿಮಾನ ನಟ ರಮೇಶ್ ಅರವಿಂದ್ ಅಭಿನಯದ ನೂರನೇ ಚಿತ್ರ. ಈ ಚಿತ್ರದಲ್ಲಿ ಬಹಳ ವರ್ಷಗಳ ನಂತರ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ ಕೂಡ ಒಂದು ಹಾಡಿನಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಮಮ್ಮಿ ಖ್ಯಾತಿಯ ಬಾಲನಟಿ ಯುವಿನಾ, ರಮೇಶ್ ಅವರ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಬುಲ್‍ಬುಲ್ ಬೆಡಗಿ ರಚಿತಾರಾಮ್ ಕೂಡ ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ನಟ ರಮೇಶ್ ಅರವಿಂದ್ ಅವರು ಮೊದಲಬಾರಿಗೆ ಒಬ್ಬ ಬುದ್ದಿಮಾಂದ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಪ್ರತಿ ಚಿತ್ರ ಹೀರೋ ಮತ್ತು ಹೀರೋಯಿನ್‌ ಸಂಬಂಧದ ಕಥೆ ಹೇಳಿದರೆ, ಈ ಚಿತ್ರ ತಂದೆ-ಮಗಳ ಸಂಬಂಧದ ಕಥೆ ಹೇಳುತ್ತದಂತೆ. ಅನಂತರಾಮಯ್ಯ ಎಂಬ ಪಾತ್ರದಲ್ಲಿ ರಮೇಶ್ ಅಭಿನಯಿಸಿದ್ದಾರೆ. ಕಪಟವರಿಯದ ಪರಿಶುದ್ಧ ಮನಸ್ಸಿನ ವ್ಯಕ್ತಿಯ ಪಾತ್ರ ರಮೇಶ್ ಅವರದ್ದು…ಹೀಗೆ ಹಲವಾರು ವಿಶೇಷಗಳನ್ನು ತವಕ-ತಲ್ಲಣಗಳನ್ನು ಅಡಗಿಸಿಕೊಂಡಿರುವ ಈ ಚಿತ್ರ ನಾಳೆ ರಾಜ್ಯಾಧ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಇದರ ಜತೆಗೆ ನವ ನಿರ್ದೇಶಕ ಎಸ್ ರವೀಂದ್ರನಾಥ್ ಅವರ ಮೊದಲ ನಿರ್ದೇಶನದ ಚಿತ್ರಕೂಡ ಹೌಡು ಪುಷ್ಪಕ ವಿಮಾನ. ಇನ್ನೊಂದು ವಿಶೇಷವೆಂದರೆ ಚಿತ್ರ ಆಸ್ಕರ್ ಗೆ ನಾಮನಿರ್ದೇಶನವಾಗಲಿದೆಯಂತೆ. ಇದಕ್ಕಾಗಿ ಪ್ರಚಾರ ಕಾರ್ಯವನ್ನು ಹಿಂದಿವುಡ್ ಸಂಸ್ಥೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.

ನ್ಯೂಯಾರ್ಕ್ ನಲ್ಲಿ ಚಿತ್ರದ ಸೆನ್ಸಾರ್ ಮಾಡಿ ನಂತರ ಚಿತ್ರದ ವಿಶೇಷ ಪ್ರದರ್ಶನವನ್ನು ಮಾಡಲಾಗುತ್ತಿದೆ. ಮಾರ್ಚ್ ನಲ್ಲಿ ಆಸ್ಕರ್ ಮೊದಲ ಸುತ್ತಿನ ಸ್ಪರ್ಧೆಗೆ ಪುಷ್ಪಕ ವಿಮಾನವನ್ನು ಕಳುಹಿಸಲಾಗುವುದು ಎಂದು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ವಿಖ್ಯಾತ್ ತಿಳಿಸಿದ್ದಾರೆ.
Pushpaka Vimana,Ramesh Aravind