ಬೆಂಗಳೂರು,ಜ,12,2017(www.justkannada.in): ಪೋಷಕರನ್ನ ಹೆದರಿಸಲು ಆತ್ಮಹತ್ಯೆ ನಾಟಕವಾಡಲು ಹೋದ ಪಿಯು ವಿದ್ಯಾರ್ಥಿನಿ  ನಿಜವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. PU student-drama- actually -committed

ಬೆಂಗಳೂರಿನ ಬಾಪೂಜಿನಗರದಲ್ಲಿ ಈ ಘಟನೆ ನಡೆದಿದೆ. ಪಿಯು ವ್ಯಾಸಾಂಗ ಮಾಡುತ್ತಿದ್ದ ಕೀರ್ತನ ಎಂಬಾಕೆಯೇ  ಪ್ರಾಣ ತೆತ್ತಿರುವ ವಿದ್ಯಾರ್ಥಿನಿ. ಈಕೆ ಕಾಲೇಜಿನಿಂದ ತಡವಾಗಿ ಬರುತ್ತಿದ್ದಳು ಎನ್ನಲಾಗಿದ್ದು, ಇದನ್ನ ಪ್ರಶ್ನಿಸಿದ ಪೋಷಕರನ್ನ ಹೆದರಿಸಲು ಈಕೆ  ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ನಾಟಕವಾಡಿದ್ದಾಳೆ.

ತಕ್ಷಣ ಪೋಷಕರು ಆಕೆಯನ್ನ ಕೆಳಕ್ಕಿಳಿಸಲು ಮುಂದಾಗಿದ್ದು, ಅಷ್ಟರಲ್ಲಿ ಹಗ್ಗ ಬಿಗಿಯಾಗಿ ನೇಣು ಕುಣಿಕೆಯಲ್ಲಿ ಸಿಲುಕಿದ ಕೀರ್ತನ ನಿಜವಾಗಿ ಪ್ರಾಣವನ್ನ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: PU student-drama- actually -committed