ರಾಯಚೂರು,ಏ,20,2017(www.justkannada.in): ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಟ್ಟಪ್ಪ ಪಾತ್ರದಾರಿ ನಟ ಸತ್ಯರಾಜ್ ನೀಡಿರುವ ಹೇಳಿಕೆ ಖಂಡಿಸಿ ಕಟ್ಟಪ್ಪನ ಶವಯಾತ್ರೆ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. protest -against - release -Bahubali-2 -Raichur

ಇಂದು ಬೆಳಿಗ್ಗೆ ಕರವೇ ಕಾರ್ಯಕರ್ತರು ವಿವಿಧ ವೃತ್ತಗಳಲ್ಲಿ ಕಟ್ಟಪನ ಶವಯಾತ್ರೆ ಮೆರವಣಿಗೆ ನಡೆಸಿ ಬಾಹುಬಲಿ-2 ಚಿತ್ರ ದಲ್ಲಿ ಕನ್ನಡಿಗರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಎಂದು ಖಂಡಿಸಿದರು

ಬಾಹುಬಲಿ-2 ಚಿತ್ರ ಬಿಡುಗಡೆಗೆ ವಿರೋಧಿಸಿ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.  ಬಾಹುಬಲಿ ಚಿತ್ರವನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಡುಗಡೆ ಮಾಡಬಾರದೆಂದು ಪಟ್ಟು ಹಿಡಿದರು. ಈ ಹಿನ್ನಲೆಯಲ್ಲಿ ಬಾಹುಬಲಿ ಚಿತ್ರ-2 ಬಿಡುಗಡೆಯನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟವನ್ನು ಕೈಗೊಂಡಿದ್ದಾರೆ. ಮತ್ತು 28 ರಂದು ಬೆಂಗಳೂರು ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದಾರೆ.

Key words: protest -against – release -Bahubali-2 -Raichur