ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್’ನಲ್ಲೂ ನಂಬರ್ 1 !

0
1518

ಲಾಸ್ ಎಂಜಲೀಸ್, ಜೂನ್ 17 (www.justkannada.in): ಪ್ರಿಯಾಂಕಾ ಚೋಪ್ರಾ ಅವರು ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ತಮ್ಮ ‘ಬೇ ವಾಚ್’ ಸಹ ನಟರಾದ ಡ್ವೇಯ್ನ್ ಜಾನ್ಸನ್ ಮತ್ತು ಝಾಕ್ ಎಫ್ರಾನ್ ಅವರನ್ನು ಹಿಂದಿಕ್ಕಿದ್ದಾರೆ.

ಒಂದು ವಾರಗಳ ಹಿಂದಷ್ಟೇ ಹಾಲಿವುಡ್ ರಿಪೋರ್ಟರ್ಸ್ ಇನಾಗರಲ್ ಟಾಪ್ ಆಕ್ಟರ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಪ್ರಿಯಾಂಕ ಚೋಪ್ರಾ ಈಗ ನಂಬರ್ 1 ಸ್ಥಾನದಲ್ಲಿದ್ದ ಜಾನ್ಸನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

ಸಾಮಾಜಿಕ ತಾಣಗಳಾದ ಫೇಸ್ ಬುಕ್, ಇನ್ಸ್ಟಾ ಗ್ರಾಮ್, ಟ್ವೀಟರ್, ಯ್ಯೂಟುಬ್ ಹಾಗೂ ಗೂಗಲ್ ಪ್ಲಸ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟ, ನಟಿಯರನ್ನು ಟಾಪ್ ಆಕ್ಟರ್ಸ್ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣಾ ಕಂಪನಿ ಎಂ.ವಿ.ಪಿಂಡೇಕ್ಸ್ ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ವಾರಕ್ಕೊಮ್ಮೆ ಈ ಟಾಪ್ ಆಕ್ಟರ್ಸ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.