ನಟಿ ಪ್ರಿಯಾಮಣಿ-ಮುಸ್ತಫಾ ರಾಜಾ ಮ್ಯಾರೇಜ್ ಡೇಟ್ ಫಿಕ್ಸ್

0
2136

ಬೆಂಗಳೂರು:ಆ-6:(www.justkannada.in)ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಅವರ ವಿವಾಹದ ಬಗ್ಗೆ ಶುಭಸುದ್ದಿಯೊಂದು ಹೊರಬಿದ್ದಿದ್ದು, ವಿವಾಹದ ದಿನಾಂಕ ನಿಕ್ಕಿಯಾಗಿದೆ. ಆ.23ಕ್ಕೆ ಪ್ರಿಯಾಮಣಿ-ಮುಸ್ತಫಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರಿಯಾ-ಮುಸ್ತಫಾ, ಕಳೆದ ವರ್ಷ ಸಿಂಪಲ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಪ್ರಿಯಾಮಣಿ ಹಾಗೂ ಮುಸ್ತಫಾ ಅವರ ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್‌ ಬದಲಿಸಿಕೊಂಡು ನಿಶ್ಚಿತಾರ್ಥ ಕಾರ್ಯ ಮುಗಿಸಲಾಗಿತ್ತು. ಈಗ ಇವರಿಬ್ಬರ ಮದುವೆಗೆ ದಿನಾಂಕ ಫಿಕ್ಸ್‌ ಆಗಿದ್ದು, ಈ ತಿಂಗಳ 23 ರಂದು ಪ್ರಿಯಾಮಣಿ- ಮುಸ್ತಫಾ ವಿವಾಹ ಮಾಡಿಕೊಳ್ಳಲು ನಿರ್ಧರಿಸಿರೆ.

ಆದರೆ ಎಲ್ಲಾ ಸೆಲೆಬ್ರೆಟಿಗಳ ತರಹ ಪ್ರಿಯಾಮಣಿ ಅದ್ದೂರಿಯಾಗಿ ವಿವಾಹವಾಗುತ್ತಿಲ್ಲವಂತೆ. ತುಂಬಾ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆ.24ರಂದು ಬೆಂಗಳೂರಿನ ಪಂಚತಾರಾ ಹೋಟೆಲ್ ವೊಂದರಲ್ಲಿ ಆರತಕ್ಷತೆ ನಡೆಯಲಿದೆಯಂತೆ
Priyamani, Mustafa raja, Wedding Date Fixed