ಬೆಂಗಳೂರು,ಜೂ,19,2017(www.justkannada.in): ಕಲ್ಲಡ್ಕ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಹಿಂದೂ ಸಂಘಟನೆ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್  ವಿರುದ್ದ ಹೇಳಿಕೆ ನೀಡದ್ದ ಸಚಿವ ರಮಾನಾಥ್ ರೈ  ಅವರು ರಾಜೀನಾಮೆ ನೀಡಬೇಕು ಎಂದು ಇಂದಿನ ಸದನದಲ್ಲಿ ಬಿಜೆಪಿ ಆಗ್ರಹಿಸಿತು.Prabhakar Bhat'- against -resignation -minister Ramanath Rai-BJP

ಪ್ರಕರಣ ಕುರಿತು ವಿಧಾನಸಭೆಯಲ್ಲಿ ವಿಪಕ್ಷನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿ, ಸಚಿವ ರಮಾನಾಥ್ ರೈ ಅವರು ಪ್ರಭಾಕರ್ ಭಟ್ ‘ ಭಾಷಣ ಮಾಡಿದರೆ ಕೇಸು ಹಾಕಿ. 307 ಕೇಸ್ ಹಾಕಿ. ಅವ ಹೆದರಿ ಓಡುತ್ತಾನೆ. ಅವನನ್ನು ಜೈಲಿಗೆ ಕಳುಹಿಸಿದರೆ ಹೊರಗೆ ಬರುವುದಿಲ್ಲ. ಅವನ ಹಿಂದೆ ಯಾರೂ ಬರುವುದಿಲ್ಲ. ಹೆದರಿ ಓಡುತ್ತಾರೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ  ಆದೇಶಿಸಿದ್ದಾರೆ. ಇದರಿಂದ ಮಾನಹಾನಿಯಾಗಿದ್ದು, ಹಿಂದು ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪೊಲೀಸರ ತನಿಖೆ ವೇಳೆ ಸಚಿವರು ಮಧ್ಯಪ್ರವೇಶಿಸಿ ಈ ರೀತಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅಭಯ್ ಚಂದ್ರ ಜೈನ್, ಸಚಿವ ರಮನಾಥ ರೈ  ಹೇಳಿಕೆ ಸರಿಯಿದೆ.  ರಮಾನಾಥ ರೈ ಪೊಲೀಸರಿಗೆ ನಿರ್ಧೇಶನ ನೀಡಿದ್ದಾರೆ. ಇದರಲ್ಲಿ ಯಾರನ್ನು ಟಾರ್ಗೆಟ್ ಮಾಡು ಉದ್ದೇಶವಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಗದ್ದಲವೇರ್ಪಟ್ಟಿತು. ಈ ವಿಚಾರವಾಗಿ ಸ್ಪೀಕರ್ ಕೋಳಿವಾಡ ಮಧ್ಯ ಪ್ರವೇಶಿಸಿ ಉಭಯ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿ ಗರಂ ಆದರು.

Key words: Prabhakar Bhat’- against -resignation -minister Ramanath Rai-BJP