ಬೆಂಗಳೂರು, ಜೂನ್ 15, (www.justkannada.in): ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ತಮ್ಮ ಅಭಿಮಾನಿಯೊಬ್ಬರಿಗೆ ನೆರವಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಪುನೀತ್​’ರನ್ನ ಭೇಟಿಯಾಗಿದ್ದ ಪುಟ್ಟ ಪೋರಿ ಪ್ರೀತಿ ಎನ್ನುವ ಹುಡುಗಿಗೆ ಅಪ್ಪು ಸಹಾಯಹಸ್ತ ಚಾಚಿದ್ದಾರೆ.

ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಪ್ರೀತಿಗೆ ಸಹಾಯ ಮಾಡೋದಾಗಿ ಈ ಹಿಂದೆ ಪುನೀತ್ ಕಂಠೀರವ ಸ್ಟುಡಿಯೋದಲ್ಲಿ ಹೇಳಿದ್ದರು. ಪುಟ್ಟ ಪ್ರೀತಿಗೆ ಮೊನ್ನೆ ಮಣಿಪಾಲ್ ಆಸ್ಪತ್ರೆಯಲ್ಲಿ ತಂದೆನೇ ಕಿಡ್ನಿ ಕೊಟ್ಟಿದ್ದರು. ಕಿಡ್ನಿ ಕಸಿ ಆದ್ಮೇಲೆ ಪ್ರೀತಿ ಆರೋಗ್ಯದಿಂದಲೇ ಮನೆಗೆ ತೆರೆಳಿದ್ದಾರೆ. ಈಗ ಪುನೀತ್ ಮಾತುಕೊಟ್ಟಂತೆ ಪ್ರೀತಿಯ ಚಿಕಿತ್ಸೆಗೆ ನೆರವಾಗಿದ್ದಾರೆ.

ತಮ್ಮ ಸದಾಶಿವನಗರದ ಮನೆಗೆ ಪ್ರೀತಿಯ ಮಾವ ಹನುಮಂತಪ್ಪ ಮತ್ತು ಕಿಡ್ನಿ ಓಮೆಗಾ ರಿಹ್ಯಾಬಿಲಿಟೇಷನ್ ಟ್ರಸ್ಟ್ ನ ಡಾ. ಆನಂದ್’ರನ್ನ ಇಂದು ಕರೆಸಿಕೊಂಡಿದ್ದರು.ಪ್ರೀತಿಯ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದಾರೆ.ಕೆಲ ಹೊತ್ತು ಪ್ರೀತಿಯ ಆರೋಗ್ಯದ ಬಗ್ಗೇನೂ ವಿಚಾರಿಸಿದರು.ಓಮೆಗಾ ರಿಹ್ಯಾಬಿಲಿಟೇಷನ್ ಟ್ರೆಸ್ಟ್’ನ ಡಾಕ್ಟರ್ ಆನಂದ್ ಅವರ ಕಿಡ್ನಿ ಟ್ರಸ್ಟ್ ಬಗ್ಗೇನೂ ವಿಚಾರಿಸಿದರು.

 

key words : power-star-puneet-helped-his-fan-bangalore-mysore