ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯಿಸಿ  ಮೈಸೂರಿನಲ್ಲಿ ಪೋಸ್ಟ್ ಕಾರ್ಡ್ ಚಳುವಳಿ….

0
588
postcard-movement-mysore-demanding-statue-sangulli-rayanna

ಮೈಸೂರು,ಆ,12,2017(www.justkannada.in) ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯಿಸಿ   ಇಂದು ನಗರದ ಮಹಾನಗರ ಪಾಲಿಕೆಯ ಮುಂಭಾಗವಿರುವ ಪೋಸ್ಟ್‌ ಬಾಕ್ಸ್ ನ ಬಳಿ ಸಂಗೊಳ್ಳಿ ರಾಯಣ್ಣ ಸೇವಾ ಪದಾಧಿಕಾರಿಗಳು ಅಂಚೆ ಕಾರ್ಡ್ ಚಳುವಳಿ ನಡೆಸಿದರು.postcard-movement-mysore-demanding-statue-sangulli-rayanna

ನೂರಾರು ಜನ ಸಂಗೊಳ್ಳಿ ರಾಯಣ್ಣ ಸೇವಾ ಪದಾಧಿಕಾರಿಗಳು ಮಹಾನಗರ ಪಾಲಿಕೆಯ ಮುಂಭಾಗ ಜಮಾವಣೆ ಗೊಂಡು ಸುಮಾರು 500 ಅಂಚೆ ಪತ್ರ ವನ್ನು ಮುಖ್ಯಮಂತ್ರಿ ಗಳ ಕಛೇರಿ, ಜಿಲ್ಲಾ ಉಸ್ತುವಾರಿ ಕಚೇರಿ, ಹಾಗೂ ನಗರಪಾಲಿಕೆಯ ಆಯುಕ್ತರು ರವರ ಕಚೇರಿಗೆ ಪತ್ರ ಬರೆದು ಶೀಘ್ರದಲ್ಲೇ ರಾಯಣ್ಣ ನವರ ಪ್ರತಿಮೆ ನಿರ್ಮಾಣಕ್ಕಾಗಿ ಒತ್ತಾಯಿಸಲಾಯಿತು.

ನಂತರ ಮಾತನಾಡಿದ ಸಂಚಾಲಕ ರಾದ ಜೋಗಿ ಮಂಜು 219 ವರ್ಷಗಳ ಇತಿಹಾಸ,ಹಾಗು ದೇಶ ಪ್ರೇಮಿ ,ಬ್ರಿಟಿಷರ ಸಿಂಹ ಸ್ವಪ್ನ ವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿಕೊಂಡ ಮಹಾ ಪುರುಷ ನ ಪ್ರತಿಮೆಯನ್ನು ಅತಿ ಹೆಚ್ಚು ಹೊರ ರಾಜ್ಯ ದ ಪ್ರವಾಸಿಗರು ಓಡಾಡುವ ಕುರುಬಾರಳ್ಳಿ ವೃತ್ತ ದಲ್ಲಿ ನಿರ್ಮಾಣ ಮಾಡಬೇಕು ಎಂದರು.

ನಗರಪಾಲಿಕೆ ಸದಸ್ಯರಾದ ಬಿ.ಎಂ.ನಟರಾಜು  ಕಳೆದ ವರ್ಷವೇ ನಗರಪಾಲಿಕೆಯ ಕೌನ್ಸಿಲ್ ನಲ್ಲಿ ನಿರ್ಮಾಣ ಮಾಡಲು ಅನುಮತಿ ಯನ್ನು ನೀಡಿದರು ನಗರಪಾಲಿಕೆಯ ಆಯುಕ್ತರು ತಾರತಮ್ಯ ಮಾಡುತ್ತಿದ್ದು, ಇವರ ಕ್ರಮ ಖಂಡನೀಯ.ಇಂತಹ ಮಹಾನ್ ಪುರುಷರ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಮುಂದಿನ ಪೀಳಿಗೆಯ ಯುವಕರುಗಳಿಗೆ ಆಶಾಕಿರಣವಾಗಬೇಕು ಈಗಿನ ಯುವಕರು ಇಂತಹ ಮಹಾನು ಪುರುಷರ ಚರಿತ್ರೆಯನ್ನು ಅರಿತು ಯುವಕರು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಅನುವು ಮಾಡಲು ಇಂತಹ ಪ್ರತಿಮೆ ಗಳು ಅವಶ್ಯಕತೆ ಇದೆ ಎಂದರು.

ಈ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ಎಂ.ನಟರಾಜ್,ಜೋಗಿ ಮಂಜು, ರಘು ಬಿ.ಎಂ.ರವಿತೇಜ, ಪ್ರಶಾಂತ್,ರಾಜೇಂದ್ರ, ಜಗದೀಶ್,ವಿಜಯಕುಮಾರ್, ರಾಜು ,ರಾಜೇಶ್,ಪುನೀತ್,ರಂಗಸ್ವಾಮಿ, ರವಿ ಕುರುಬಾರಳ್ಳಿ,  ಇದ್ದರು.

Key words: Postcard movement – Mysore -demanding – statue -Sangulli Rayanna.