ರೋಣ, ಮೇ 30 (www.justkannada.in): ಪ್ಲಾಸ್ಟಿಕ್ ಅಕ್ಕಿ ಆಯ್ತು, ಮೊಟ್ಟೆಯಾಯ್ತು ಈಗ ಪ್ಲಾಸ್ಟಿಕ್‌ ಸಕ್ಕರೆಯ ಸುದ್ದಿ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಕಿರಾಣಿ ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್‌ ಸಕ್ಕರೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ರೋಣ ತಾಲೂಕಿನ ಇಟಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಅದನ್ನು ಸಂಗ್ರಹಿಸಿದ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿಕೊಟ್ಟರಲ್ಲದೆ, ಮುಂದಿನ ಸೂಚನೆ ನೀಡುವವರೆಗೆ ಮಾರಾಟ ಸಕ್ಕರೆ ಮಾರದಂತೆ ಅಂಗಡಿ ಮಾಲೀಕರಿಗೆ ಸೂಚಿಸಿದ್ದಾರೆ. ಈ ಅಂಗಡಿಯಿಂದ ಒಯ್ದ ಸಕ್ಕರೆಯನ್ನು ಹಾಕಿ ಟೀಗೆ ಮಾಡುವ ವೇಳೆ ಪ್ಲಾಸ್ಟಿಕ್‌ ರೀತಿಯ ಕಪ್ಪು ಬಣ್ಣದ ವಸ್ತು ಪಾತ್ರೆಗೆ ಅಂಟಿಕೊಳ್ಳುತ್ತಿದ್ದು, ಮನೆ ತುಂಬಾ ದುರ್ವಾಸನೆ ಆವರಿಸಿ ಚಹಾ ಕುಡಿಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಆ ಅಂಗಡಿಯಲ್ಲಿ ಸಕ್ಕರೆ ತಂದು ಚಹಾ ಮಾಡಿ ನೋಡಿದಾಗ ಪಾತ್ರೆಯ ತಳದಲ್ಲಿ ಅಂಗೈಯಷ್ಟುಗಾತ್ರದ ಸುಟ್ಟಪ್ಲಾಸ್ಟಿಕ್‌ ವಸ್ತು ಸಂಗ್ರಹವಾಗಿತ್ತು. ಹೀಗಾಗಿ, ತಕ್ಷಣ ಎಚ್ಚೆತ್ತ ಅಧಿಕಾರಿಗಳು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರಲ್ಲದೆ, ಇನ್ನುಳಿದ ಸಕ್ಕರೆ ಮಾರದಂತೆ ಸೂಚಿಸಿದ್ದಾರೆ.

ಕೃಪೆ: ಸುವರ್ಣ ನ್ಯೂಸ್