ಬೆಂಗಳೂರು:ಜೂ-19:(www.justkannada.in)ರಾಜ್ಯ ರಾಜಧಾನಿಯ ನಿವಾಸಗಳಿಗೆ ಕೊಳವೆ ಮೂಲಕ ಅನಿಲ ಒದಗಿಸುವ ಕನಸು ನನಸಾಗಿದೆ. ಈಗ ಕೊಳವೆ ಮೂಲಕ ಅಡುಗೆ ಮನೆಗಳಿಗೆ ನೇರವಾಗಿ ಪಿಎನ್ ಜಿ(ಪೇಯ್ಡ್ ನ್ಯಾಚುಲರ್ ಗ್ಯಾಸ್) ಸೌಲಭ್ಯ ದೊರೆಯಲಿದೆ. ಬೆಂಗಳೂರಿನಲ್ಲಿ ಬಹುನಿರೀಕ್ಷಿನ ಹಸಿರು ಇಂಧನ ಬಳಕೆ ಯೋಜನೆ ಚಾಲನೆ ನೀಡಲಾಗಿದ್ದು, ಮುಂದಿನ 5 ವರ್ಷ್ಜಗಳಲ್ಲಿ ಮನೆ ಮನೆಗಳಿಗೆ ಪಿಎನ್ ಜಿ ಇಂಧನ ತಲುಪಲಿದೆ.

ಪರಿಸರ ಸ್ನೇಹಿಯಾದ ಸೈಸರ್ಗಿಕ ಅನಿಲವನ್ನು ಕೊಲವೆ ಮೂಲಕ ಸಂಪರ್ಕಿಸುವ ಯೋಜನೆಯನ್ನು ಗೇಲ್ ಸಂಸ್ಥೆ ಕೈಗೆತ್ತಿಕೊಂಡಿದೆ. 2008ರಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆಯಲಾಗಿತ್ತು. ಪ್ರಸ್ತುತ ಬೊಮ್ಮನಹಳ್ಳಿ ಭಾಗದಲ್ಲಿ 3 ಸಾವಿರ ಜನರು ಪ್ರಾಯೋಗಿಕವಾಗಿ ಪಿಎನ್ ಜಿ ಸೌಲಭ್ಯವನ್ನು ಪಡೆದಿದ್ದಾರೆ. ಒಟ್ಟು 34,500 ಮನೆಗಳಿಗೆ ಪಿಎನ್ ಜಿ ಸಂಪರ್ಕಿಸಲು ಮೂಲಸೌಕರ್ಯ ಒದಗಿಸಿದ್ದು, ಈ ಪೈಕಿ 23,300 ಮನೆಗಳನ್ನು ಶೀಘ್ರವೇ ಸಂಪರ್ಕಿಸಲಾಗುತ್ತದೆ. ಮುಂದಿನ 5 ವರ್ಷಗಳಲ್ಲಿ 1.32 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಗೇಲ್ ಕಂಪನಿ ತಿಳಿಸಿದೆ.

ಒಟ್ಟು 6,283 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಕ್ಕೆ ಬರಲಿರುವ ಯೋಜನೆ ಬೆಂಗಳೂರು ನಗರ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಆನೆಕಲ್ ಪಟ್ಟಣಗಳಿಗೂ ವಿಸ್ತರಣೆಯಾಗಲಿದೆ. ಈ ಯೋಜನೆಗಾಗಿ ಒಟ್ಟು 4,305 ಕಿ.ಮೀ ವ್ಯಾಪ್ತಿಯಲ್ಲಿ ಅನಿಲ ಜಾಲವನ್ನು ಸಂಪರ್ಕಿಸಲಾಗುತ್ತದೆ. ಅಪಾರ್ಟ್ ಮೆಂಟ್, ಕೈಗಾರಿಕೆಗೂ ಸೌಲಭ್ಯ ಸಿಗಲಿದೆ. ಅಲ್ಲದೇ ಅಯ್ದ ಕೈಗಾರಿಕಾ ಘಟಕಗಳಿಗೂ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ 60ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

Piped Natural Gas (PNG), network, across Bengaluru,
GAIL, is already supplying PNG to residential and commercial buildings in Bangaluru