ಫೇಸ್’ಬುಕ್’ನಿಂದ ‘ವರ್ಕ್ ಪ್ಲೇಸ್’ ಫ್ರೀ ವರ್ಷನ್ ಬಿಡುಗಡೆ

0
1242

ನವದೆಹಲಿ, ಏಪ್ರಿಲ್ 11 (www.justkannada.in): ನಿಮ್ಮ ಆಫೀಸ್’ನಲ್ಲಿ ಇರುವವರೊಂದಿಗೆ ಸಂಪರ್ಕ ಸಾಧಿಸಲು ಫೇಸ್ಬುಕ್ ಅನ್ನು ಬಳಸಬಹುದಾಗಿದೆ. ಯೆಸ್. ಇದಕ್ಕಾಗಿಯೇ ಫೇಸ್’ಬುಕ್ ವರ್ಕ್ ಪ್ಲೇಸ್ ಫ್ರೀ ವರ್ಷನ್ ಬಿಡುಗಡೆ ಮಾಡಿದೆ.

2016ರ ಅಕ್ಟೋಬರ್’ನಲ್ಲಿ ಫೇಸ್’ಬುಕ್ ವರ್ಕ್ ಪ್ಲೇಸ್ ಲಾಂಚ್ ಆಗಿತ್ತು. ಈಗಾಗಲೇ ಲಕ್ಷಾಂತರ ಜನ ಇದರ ಚಂದಾದಾರರಾಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಫೇಸ್’ಬುಕ್ ವರ್ಕ್ ಪ್ಲೇಸ್’ನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಇದರ ಉಚಿತ ಆವೃತ್ತಿಯನ್ನು ಬಿಡುಗಡೆ ಮಾಡಲು ಫೇಸ್’ಬುಕ್ ಮುಂದಾಗಿದೆ.

ವರ್ಕ್ ಪ್ಲೇಸ್ ಕೂಡಾ ಫೇಸ್’ಬುಕ್’ನಂತಯೇ ಕಾರ್ಯ ನಿರ್ವಹಿಸುವುದರಿಂದ, ನೋಡಲು ಕೂಡಾ ಫೇಸ್’ಬುಕ್ ನಂತೆಯೇ ಇರಲಿದೆ. ವರ್ಕ್ ಪ್ಲೇಸ್ ಬಳಕೆದಾರರು ಇಲ್ಲಿ ಸಹ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳುವದರೊಂದಿಗೆ ಆಪ್’ಡೇಟ್’ಗಳನ್ನು ಪೋಸ್ಟ್ ಮಾಡಬಹುದಾಗಿದೆ. ಅಲ್ಲದೇ ಸ್ನೇಹಿತರನ್ನು ಟ್ಯಾಗ್ ಮಾಡುವುದು, ಫೈಲ್’ಗಳನ್ನು ಶೇರ್ ಮಾಡುವುದು, ಹಾಗು ಒಂದೇ ಸಮಯದಲ್ಲಿ ಹಲವರೊಂದಿಗೆ ಚಾಟ್ ಮಾಡು ಸೌಲಭ್ಯವೂ ಇರಲಿದೆ.

ಇದರಲ್ಲಿರುವ ಮೆಸೆಂಜರ್ ಕೂಡಾ ವರ್ಕ್ ಚಾಟ್ ನಂತೆ ಕಾರ್ಯ ನಿರ್ವಹಿಸಲಿದ್ದು, ವಿಡಿಯೋ ಕಾಲ್, ಗ್ರೂಪ್ ಆಡಿಯೋ ಕಾಲ್ ಮಾಡಬಹುದಾಗಿದೆ. ಸದ್ಯ ಫೇಸ್’ಬುಕ್ ಮಾದರಿಯಲ್ಲೇ ವರ್ಕ್ ಪ್ಲೇಸ್’ನ್ನು ಜನಪ್ರಿಯಗೊಳಿಸುವ ಸಲುವಾಗಿ ಇದರ ಉಚಿತ ಆವೃತ್ತಿ ಬಿಡುಗಡೆಯಾಗುತ್ತಿದೆ. ಈ ಉಚಿತ ಆವೃತ್ತಿಯನ್ನು ವರ್ಕ್ ಪ್ಲೇಸ್ ಸ್ಟಾಂಡರ್ಡ್ ಎಂದು ಕರೆಯಲಾಗುತ್ತಿದ್ದು, ಇದರಲ್ಲಿಯೇ ವರ್ಕ್ ಪ್ಲೇಸ್ ಪ್ರೀಮಿಯಮ್ ಎಂಬ ಮತ್ತೊಂದು ಆವೃತ್ತಿಯನ್ನೂ ಸೇರಿಸಲಾಗಿದೆ.