ಅ.13ರಂದು ಕರೆ ನೀಡಿದ್ದ ಪೆಟ್ರೋಲ್ ಬಂಕ್ ಮುಷ್ಕರ ವಾಪಸ್

0
316

ಬೆಂಗಳೂರು:ಅ-12 :(www.justkannada.in) ಪೆಟ್ರೋಲ್ ಬಂಕ್ ಡೀಲರ್ ಗಳು ಅ.13ರಂದು ದೇಶಾದ್ಯಂತ ಕರೆ ನೀಡಿದ್ದ 24 ಗಂಟೆಗಳ ಬಂದ್ ಮುಷ್ಕರವನ್ನು ವಾಪಸ್ ಪಡೆದುಕೊಂಡಿದ್ದಾರೆ.

ಮುಷ್ಕರ ನಡೆಸಿದರೆ ಗುತ್ತಿಗೆ ರದ್ದತಿ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನೀಡಿದ್ದರಿಂದ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ನಡೆಸುವ ಬದಲಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಸಲುವಾಗಿ ದೇಶವ್ಯಾಪಿ ಮುಷ್ಕರ ಕೈಬಿಡಲು ಪೆಟ್ರೋಲಿಯಂ ಡೀಲರ್‌ ಸಂಘಟನೆಗಳು ನಿರ್ಧರಿಸಿವೆ.

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕೈಬಿಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರಮಟ್ಟದ ಮೂರು ಸಂಘಟನೆಗಳು ಒಟ್ಟುಗೂಡಿ “ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌’ನ ನೇತೃತ್ವದಲ್ಲಿ ಅ.13ರಂದು ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಲಾಗಿತ್ತು. ಆದರೆ ಮುಷ್ಕರಕ್ಕೆ ಬದಲಾಗಿ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧರಿಸಿರುವುದರಿಂದ ಅ.13ರ ಮುಷ್ಕರ ಕೈಬಿಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್‌ ಸಂಘದ ಅಧ್ಯಕ್ಷ ಎಚ್‌.ಎಸ್‌. ಮಂಜಪ್ಪ ತಿಳಿಸಿದ್ದಾರೆ.
petrol bunk strike,on august 13 is abandoned,by dealers