ಫ್ಲಾಟ್ ಕೊಡಿಸುವುದಾಗಿ 20 ಮಂದಿಗೆ ವಂಚನೆ: ಆರೋಪಿ ಅರೆಸ್ಟ್…

0
612
people- fraudulent –plotting- Arrest -accused

ಬೆಂಗಳೂರು,ಆ,11,2017(www.justkannada.in):  ಪ್ಲಾಟ್ ಕೊಡಿಸುವುದಾಗಿ 20 ಮಂದಿಗೆ ವಂಚನೆ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಸಂಜಯನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.people- fraudulent –plotting- Arrest -accused

ಆನಂದ್ ಬಂಧಿತ ಆರೋಪಿ. ಈ ಕಾರ್ತಿಕ್ ಪ್ರಾಪರ್ಟಿಸ್ ಎಂಬ ಹೆಸರಿನಲ್ಲಿ ಕಚೇರಿ ಸ್ಥಾಪಿಸಿ ಪ್ಲಾಟ್ ಕೊಡಿಸುವುದಾಗಿ ನಂಬಿಸಿ ಸುಮಾರು 20 ಮಂದಿಯ ಬಳಿ ತಲಾ 5ರಿಂದ 10 ಲಕ್ಷ ಹಣ ಪಡೆದಿದ್ದ. ಸುಮಾರು ಒಂದುವರೆ ಕೋಟಿ ಹಣ ಸಂಗ್ರಹಿಸಿ ಪರಾರಿಯಾಗಿದ್ದ. ನಕಲಿ ದಾಖಲೆ ನೀಡಿ ಖಾತೆ ತೆರೆದಿದ್ದ ಆರೋಪಿ ಆನಂದ್ ಹಣವನ್ನ ಖಾತೆಗೆ  ಹಾಕಿಸಿಕೊಂಡು ವಂಚನೆ ಮಾಡಿದ್ದ.

ವಂಚನೆಗೊಳಗಾದವರು ಈ ಕುರಿತು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಚರಣೆ ನಡೆಸಿದ ಪೊಲೀಸರು ಇಂದು ಆರೋಪಿ ಆನಂದ್ ನನ್ನ ಬಂಧಿಸಿದ್ದಾರೆ.

Key words:people- fraudulent –plotting- Arrest -accused