ಪುನೀತ್ ಮುಂದಿನ ಚಿತ್ರಕ್ಕೆ ಪವನ್ ಒಡೆಯರ್ ಡೈರೆಕ್ಷನ್ ಫಿಕ್ಸ್ !

0
410

ಬೆಂಗಳೂರು, ಜನವರಿ 12 (www.justkannada.in): ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮುಂದಿನ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.

ಮುಂದಿನ ತಿಂಗಳು ಸಿನಿಮಾ ಸೆಟ್ಟೇರಲಿದೆ. ‘ರಣವಿಕ್ರಮ’ ಸಿನಿಮಾ ನಂತರ ಮತ್ತೊಮ್ಮೆ ಪವನ್ ಒಡೆಯರ್ ಹಾಗೂ ಪುನೀತ್‌ರಾಜ್ ಕುಮಾರ್ ಒಂದಾಗುತ್ತಿದ್ದಾರೆ. ‘ಅಂಜನೀಪುತ್ರ ಚಿತ್ರದ ನಂತರ ಇದ್ದಿದ್ದು ನನ್ನದೇ ನಿರ್ಮಾಣದ ಸಿನಿಮಾ. ಹೀಗಾಗಿ ಪವನ್ ಒಡೆಯರ್ ನಿರ್ದೇಶನದಲ್ಲಿ ಮುಂದಿನ ತಿಂಗಳು ಸಿನಿಮಾ ಸೆಟ್ಟೇರುತ್ತಿದೆ. ಕತೆ ಎಲ್ಲ ಓಕೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ ಪುನೀತ್.

ಚಿತ್ರಕ್ಕಾಗಿ ತಾಂತ್ರಿಕ ವರ್ಗ ಹಾಗೂ ಕಲಾವಿದರ ಆಯ್ಕೆ ನಡೆಯಬೇಕಿದೆ. ಈ ಬಾರಿಯೂ ಅಪ್ಪು ಅಭಿಮಾನಿಗಳನ್ನು ಮೆಚ್ಚಿಸುವ ಜತೆಗೆ ಎಲ್ಲ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ ಮಾಡುತ್ತೇವೆ. ಆ ನಿಟ್ಟಿನಲ್ಲೇ ಪವನ್ ಒಡೆಯರ್ ಅವರು ಕತೆ ಮಾಡಿಕೊಂಡಿದ್ದಾರೆ. ಪವನ್ ಒಡೆಯರ್ ಅವರು ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಲಾಂಚ್ ಮಾಡಿಸುವ ತಯಾರಿಯಲ್ಲಿದ್ದಾರೆಂಬ ಸುದ್ದಿ ಇದೆ.

ಆದರೆ, ಮುಂದಿನ ತಿಂಗಳೇ ರಾಕ್‌ಲೈನ್ ನಿರ್ಮಾಣದ ಸಿನಿಮಾ ಶುರುವಾಗುವುದಾದರೆ, ಅಭಿಷೇಕ್ ನಟನೆಯ ಚಿತ್ರವನ್ನು ಪವನ್ ಯಾವಾಗ ಶುರು ಮಾಡುತ್ತಾರೆ. ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಈಗಾಗಲೇ ಕತೆ, ಚಿತ್ರಕತೆ ಎಲ್ಲವನ್ನೂ ಅಂತಿಮಗೊಳಿಸಿದ್ದಾರೆ. ಹೀಗಾಗಿ ಪವನ್ ಒಡೆಯರ್ ಯಾವ ಚಿತ್ರವನ್ನು ಮೊದಲು ಶುರು ಮಾಡುತ್ತಾರೋ ಗೊತ್ತಿಲ್ಲ.