ಮೈಸೂರಿನ ಶಕ್ತಿಧಾಮದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ:ಅಮ್ಮನ ನೆನಪಿನಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಹೊಸ ಬಟ್ಟೆ ನೀಡಿ ಸಿಹಿ ಹಂಚಿದ ನಟ ಪುನೀತ್ ರಾಜ್ ಕುಮಾರ್..

0
376
parvatamma-rajkumar-birthday-celebration-mysores-shaktidhama-punith-rajkumar

ಮೈಸೂರು,ಡಿ,72017(www.justkannada.in): ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು: ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಪತ್ನಿ ಅಶ್ವಿನಿ ಭಾಗಿಯಾಗಿದ್ದರು.

ಪಾರ್ವತಮ್ಮ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದ ನಟ ಪುನೀತ್ ರಾಜ್ ಕುಮಾರ್ ಅಮ್ಮನ ನೆನಪಿನಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಹೊಸ ಬಟ್ಟೆ ನೀಡಿ ಸಿಹಿ ಹಂಚಿದರು. ನಂತರ ಒಂದು ಗಂಟೆಗೂ ಹೆಚ್ಚು ಕಾಲ ಶಕ್ತಿಧಾಮದ ಮಹಿಳೆಯರು ಮಕ್ಕಳು ಸಿಬ್ಬಂದಿ ಜೊತೆ ಪುನೀತ್ ರಾಜ್ ಕುಮಾರ್ ಕಾಲ ಕಳೆದರು.

ಶಕ್ತಿಧಾಮ ಎಂಬುದು ಪಾರ್ವತಮ್ಮ ರಾಜ್‌ಕುಮಾರ್ ಅವರು ಸ್ಥಾಪಿಸಿದ್ದ ಮಹಿಳೆಯರ ಮಕ್ಕಳ ಪುನರ್ವಸತಿ ಕೇಂದ್ರವಾಗಿದೆ. ಸದಾ ಪ್ರಚಾರದಿಂದ ದೂರವಿರುವ ಪುನೀತ್ ರಾಜ್‍‌ಕುಮಾರ್‌, ಮಾಧ್ಯಮದವರಿಗೆ ಮಾಹಿತಿ ನೀಡದೆ ಪೂಜೆ ಮಾಡಿ ತೆರಳಿದ್ದಾರೆ.

key words:Parvatamma Rajkumar- birthday- celebration – Mysore’s Shaktidhama- Punith Rajkumar