ಕರಾಚಿ, ನವೆಂಬರ್ 14 (www.justkannada.in): ಪಾಕಿಸ್ತಾನದ ವಿವಾದಾತ್ಮಕ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಪಾಕಿಸ್ತಾನದ ಪರವಾಗಿ ಮೂರು ಮಾದರಿಯಲ್ಲೂ ಮಿಂಚಿದ್ದ ಸಯೀದ್ ಅಜ್ಮಲ್ ಉತ್ತಮ ಫಾರ್ಮ್ ನಲ್ಲಿರುವಾಗಲೇ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಟೆಸ್ಟ್ ನಲ್ಲಿ 35 ಪಂದ್ಯಗಳನ್ನು ಆಡಿರುವ ಅವರು 178 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಇನ್ನು 113 ಏಕದಿನ ಪಂದ್ಯಗಳಲ್ಲಿ 184 ವಿಕೆಟ್ ಗಳನ್ನು ಪಡೆದಿದ್ದಾರೆ. 24 ರನ್ ಗಳಿಗೆ 5 ವಿಕೆಟ್ ಪಡೆದಿರುವುದು ಅವರ ವೈಯಕ್ತಿಕ ಸಾಧನೆಯಾಗಿದೆ.