ರಾಜ್ಯದ ಶಾಂತಿ ಕಾಪಾಡೋದು ನಮ್ಮ ಉದ್ದೇಶ; ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ- ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಗೃಹ ಸಚಿವ ರಾಮಲಿಂಗರೆಡ್ಡಿ….

0
318
Our purpose -safeguard -Home Minister Ramalinga Reddy- informed -Mysore.

ಮೈಸೂರು,ಅ,12,2017(www.justkannada.in): ನಮ್ಮ ಗೃಹ ಇಲಾಖೆ ಉದ್ದೇಶ ರಾಜ್ಯದ ಶಾಂತಿ ಕಾಪಾಡೋದು. ಹೀಗಾಗಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದರು.Our purpose -safeguard -Home Minister Ramalinga Reddy- informed -Mysore.

ಮೈಸೂರಿಗೆ ಇಂದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ  ಬಳಿಕ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಗೃಹ ಇಲಾಖೆ ಮತ್ತಷ್ಟು ಚುರುಕು ಗೊಳ್ಳಲಿದ್ದು, ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಗ್ರಾಮಾಂತರ ಪ್ರದೇಶದಲ್ಲಿ ಹೋಸ ಬೀಟ್ ಅಳವಡಿಸಲಾಗಿದೆ. ನಗರ ಹಾಗೂ ಗ್ರಾಮೀಣ  ಪ್ರದೇಶದಲ್ಲಿ ರಾತ್ರಿ ಬೀಟ್ ಹೆಚ್ಚಿಸಲಾಗಿದೆ.  ಪ್ರತಿ ಹಳ್ಳಿಗಳಿಗೂ ಪೊಲೀಸರು ಭೇಟಿ ನೀಡ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಜಗತ್ತು ಇರೋವರೆಗೂ ಗೂಂಡಾಗಿರಿ ಇರುತ್ತೆ. ಆದ್ರೆ ಅದನ್ನ ತಹಬದಿಗೆ ತರೋದು ಮುಖ್ಯ. ಹೀಗಾಗಿ ಮೀಟರ್ ಬಡ್ಡಿ ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೆನೆ. ಜತೆಗೆ ಕಾನೂನು ಬಾಹಿರವಾಗಿ ಅಗ್ರಿಮೆಂಟ್ ಮಾಡಿ ಬಡವರನ್ನ ಸುಲಿಗೆ ಮಾಡೋರನ್ನ ಮಟ್ಟಹಾಕುವಂತೆ ಸಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬಾರ್ ಮಾಲಿಕರು ನಿಗದಿತ ಸಮಯಕ್ಕೆ ಅಂಗಡಿ ತೆರೆದು ಮುಚ್ಚಬೇಕು.ಠಾಣೆಗೆ ಬರೋ ವ್ಯಕ್ತಿಗಳಿಂದ ಮೊದಲು ಎಫ್ ಐ ಆರ್ ದಾಖಲಿಸಬೇಕು. ನೊಂದವರಿಗೆ ಮೊದಲು ನ್ಯಾಯ ಒದಗಿಸಬೇಕು. ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವ್ಯಕ್ತಿಗಳು ಜೈಲಿಗೆ ಹೋಗುವಂತ ಮಾಡಬೇಕು . ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಅಫೀಮು ಮಾರಾಟ ಮಾಡೋರು ಹಾಗೂ ಬೆಳೆಯವುವರ ಮೇಲು  ಎನ್ ಡಿ ಪಿ ಎಫ್ ಅಡಿ ಪ್ರಕರಣ ದಾಖಲಿಸಬೇಕು ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ  ಸೂಚಿಸಿದರು.

Key words: Our purpose -safeguard -Home Minister Ramalinga Reddy- informed -Mysore.