ಮೈಸೂರು,ಜೂ,19,2017(www.justkannada.in): ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಭಾರೀ ಪ್ರಮಾದ ಭೂ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಭೂಹಗರಣದಲ್ಲಿ ಸರ್ಕಾರಿ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂದು ಅಲ್ಲಿನ ರೈತರು ಆರೋಪಿಸಿದ್ದಾರೆ.officials-involved-land-scam-hd-kote-farmers-accused

ಇಲ್ಲಿನ ಕೆಲ ಅಧಿಕಾರಿಗಳೇ ಈ ಹಗರಣದಲ್ಲಿ ಭಾಗಿಯಾಗಿ ರೈತರ ಜಮೀನುಗಳನ್ನ ಬಲವಂತವಾಗಿ ಕಿತ್ತುಕೊಂಡು ಇತರರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಜತೆಗೆ ಅಧಿಕಾರಿಗಳು ಸರ್ಕಾರಿ ಜಮೀನುಗಳನ್ನೇ ಒತ್ತುವಾರಿ ಮಾಡಿಕೊಂಡು ಖಾತೆ ಮಾಡಿಕೊಟ್ಟಿದ್ದಾರೆಂದು ರೈತರು ಆರೋಪಿಸಿದ್ದಾರೆ. ಇದರಿಂದ ನ್ಯಾಯ ಸಿಗದೆ ನೊಂದ ರೈತರು ಬೀದಿಯಲ್ಲಿ ಕಣ್ಣಿರಿಡುತ್ತಿದ್ದಾರೆ ಎನ್ನಲಾಗುತ್ತಿದೆ.officials-involved-land-scam-hd-kote-farmers-accused

ಹೀಗಾಗಿ ಈ ಕುರಿತು ಸಂಪೂರ್ಣ ವರದಿ ನೀಡುವಂತೆ ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಎಸಿ ಅವರಿಗೆ ಸೂಚಿಸಿದ್ದಾರೆ. ಇನ್ನು ಹಗರಣ ಕುರಿತು  ಎಸಿ ಅವರು ವರದಿ ಡಿಸಿ ಅವರಿಗೆ ಸಂಪೂರ್ಣ ವರದಿ ನೀಡಿದ್ದೆ ಆದಲ್ಲಿ ಇಲ್ಲಿನ ಅಕ್ರಮಗಳಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

ಭೂಹಗರಣದ ಜತೆಗೆ ಎಚ್.ಡಿ.ಕೋಟೆ ಕೋಟೆ ಭಾಗದಲ್ಲಿ ಅಕ್ರಮ ರೆಸಾರ್ಟ್ ಗಳ ಕಾರುಬಾರು ಜೋರಾಗಿದ್ದು, ಇಲ್ಲಿ ಕಬಿನಿ ಹಿನ್ನಿರಿನಲ್ಲಿರುವ ಅನೇಕ ರೆಸಾರ್ಟ್ ಗಳು ಅಕ್ರಮವಾಗಿ ನಡೆಸುತ್ತಿವೆ. ಈ ಬಗ್ಗೆ ಸ್ವತಹ ಇಲ್ಲಿನ ಅಧಿಕಾರಿಗಳೇ ನೋಟಿಸ್  ನೀಡಿದರೂ  ಇದಕ್ಕೆ ಅಲ್ಲಿ ಕ್ಯಾರೆ ಎನ್ನುತ್ತಿಲ್ಲ. ಜತೆಗೆ ಹಣ ಇದ್ದವರಿಗೆ ನೋಟೀಸ್  ಲೆಕ್ಕಕ್ಕೆ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Key words: officials – involved -land scam -HD kote-farmers – accused