ಬೆಂಗಳೂರು,ಅ,12,2017(www.justkannada.in): ಟೋಲ್‌ ದರ ಹೆಚ್ಚು ಮಾಡಿದಾಗಲೆಲ್ಲ ನೈಸ್ ಗೆ ನೋಟಿಸ್ ಕೊಟ್ಟಿದ್ದೆವು. ಆದ್ರೆ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕಾನೂನು ಸಚಿವ ಟಿ.ಬಿಜಯಚಂದ್ರ ತಿಳಿಸಿದರು. notice-toll rate -increased. -preventing -Minister T.B Jayachandra.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಟಿ.ಬಿ ಜಯಚಂದ್ರ,  ನೈಸ್ ಅಕ್ರಮ ಮಾಡಿರುವುದು ಸತ್ಯ. ಆದ್ರೆ, ನ್ಯಾಯಾಲಯದ ನೆಪ ಇರಿಸಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನೈಸ್ ಅಕ್ರಮದ ಸದನ ಸಮಿತಿ ವರದಿ. ಅಕ್ರಮದ ವಿರುದ್ದ ಕ್ರಮ ಜರುಗಿಸಲು ನ್ಯಾಯಾಲಯದಲ್ಲಿರುವ ಕೇಸುಗಳಿಂದ ವಿಳಂಬವಾಗುತ್ತಿದೆ. ನೈಸ್ ಹಗರಣ ಕುರಿತು ಸಿಬಿಐ ತನಿಖೆ ಮಾಡಬೇಕು ಅಂತ ಸದನ ಸಮಿತಿ ವರದಿ ನೀಡಿತ್ತು. ಇದರ ಸಾಧಕ ಭಾದಕ ಕುರಿತು ಕಾನೂನು ಇಲಾಖೆ ಪರಾಮರ್ಶೆ ನಡೆಸಿ,‌ ಈಗ‌ ಲೋಕೋಪಯೋಗಿ ಇಲಾಖೆಯ ಅಭಿಪ್ರಾಯ ಪಡೆಯಲಿದ್ದೇವೆ ಎಂದು ಸಚಿವ ಟಿ.ಬಿ ಜಯಚಂದ್ರ ಹೇಳಿದರು.

ನೈಸ್ ಗೆ ಸಂಬಂಧಿಸಿದ‌ ಕೇಸ್‌ ಗಳನ್ನು ನಡೆಸಲು ಸುನಿಲ್‌ ಯಾದವ್ ಎಂಬುವರನ್ನೇ ವಿಶೇಷವಾಗಿ ನೇಮಕ ಮಾಡಲಾಗಿದೆ. ಸರಕಾರ ಮತ್ತು ನೈಸ್ ಸಂಸ್ಥೆ ನಡುವೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಡ್ ನಲ್ಲಿ ಒಟ್ಟು40 ಕೇಸ್‌ ನಡೀತಾ ಇದೆ. ಈ ಕೇಸ್ ಗಳ ಬಗ್ಗೆ ಚರ್ಚೆ ಮಾಡಲು ಸದ್ಯದಲ್ಲೇ ಎಜಿ ಭೇಟಿ ಮಾಡ್ತೀನಿ ಎಂದು ಜಯಚಂದ್ರ ಅವರು ಮಾಹಿತಿ ನೀಡಿದರು.

Key words: notice-toll rate -increased. -preventing -Minister T.B Jayachandra.