ನಿಮಗೆ ಮಾನ ಮರ್ಯಾದೆ ಇಲ್ಲ; ಕಲಾಪ ಹಾಳು ಮಾಡುತ್ತಿದ್ದೀರಿ- ಬಿಜೆಪಿ ವಿರುದ್ದ ಹರಿಹಾಯ್ದ ಸಿಎಂ ಸಿದ್ದರಾಮಯ್ಯ;ಧರಣಿ ಕೈಬಿಡುವಂತೆ ಸ್ಪೀಕರ್ ಮನವಿ….

0
647
not respect -- proceedings -against -BJP -chief minister Siddaramaiah

ಬೆಂಗಳೂರು,ಮಾ,20,2017(www.justkannada.in):  ವಿಧಾನಸಭೆ ಕಲಾಪ ಇಂದು ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಡೈರಿ ವಿಚಾರ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಸದಸ್ಯರನ್ನ ತರಾಟೆಗೆ ತೆಗದುಕೊಂಡರು.

ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸದಸ್ಯರ ವಿರುದ್ದ ಹರಿಹಾಯ್ದ ಸಿಎಂ ಸಿದ್ದರಾಮಯ್ಯ, ನಿಮಗೆ ಮಾನ ಮರ್ಯಾದೆ ಇಲ್ಲವಾ? ರಾಜ್ಯವನ್ನ ಹಾಳು ಮಾಡಿದವರು ನೀವು. ಲೂಟಿಕೋರರು ನೀವು.  ಈಗ ಕಲಾಪ ಹಾಳು ಮಾಡುತ್ತಿದ್ದೀರಾ. ನಿಮ್ಮ ನಡವಳಿಗೆ ಬೂತನ ಬಾಯಲ್ಲಿ ಭಗವತ್ಗೀತೆ ಬಂದತೆ ಎಂದು ವಾಗ್ದಾಳಿ ನಡೆಸಿದರು.

ಈ ನಡುವೆ ಬಿಜೆಪಿ ಸದಸ್ಯರ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ‘ಬಿಜೆಪಿ ಭ್ರಷ್ಟಾಚಾರ ಪಕ್ಷ’ ಎಂದು ಫ್ಲೆಕ್ಸ್ ಹಿಡಿದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಗದ್ದಲ ಉಂಟಾಯಿತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕೋಳಿವಾಡ,  ರಾಜ್ಯದಲ್ಲಿ ಭೀಕರ ಬರಗಾಲವಿದೆ. ಜನರು ನಮ್ಮನ್ನ ನೋಡುತ್ತಿದ್ದಾರೆ.  ಈ ರಾಜ್ಯದ ಸದನ ದೇಶಕ್ಕೆ ಮಾದರಿಯಾದದು. ದಯವಿಟ್ಟು ಧರಣಿ ನಿಲ್ಲಿಸಿ ಕಲಾಪದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ಎಲ್ಲರ ಒತ್ತಡಕ್ಕೆ ಮಣಿದ ಬಿಜೆಪಿ ಸದಸ್ಯರು ಧರಣಿ ಕೈಬಿಟ್ಟಿದ್ದಾರೆ.

Key words: not respect — proceedings -against -BJP -chief minister Siddaramaiah