ಬೆಂಗಳೂರು, ಮಾರ್ಚ್ 23 (www.justkannada.in): ಸಾಮಾನ್ಯವಾಗಿ ಲೈಂಗಿಕಕ್ರಿಯೆಯಲ್ಲಿ ಉದ್ರೇಕ ಹೆಚ್ಚು ಕಾಲ ಉಳಿಯದೇ ಹೋಗುವುದರಿಂದ ದಂಪತಿಗಳ ನಡುವೆ ವಿರಸ ಮತ್ತು ಅತೃಪ್ತಿ ಎದುರಾಗುತ್ತದೆ. ಇದು ಕ್ರಮೇಣ ಹತಾಶೆಗೆ ಕಾರಣವಾಗುತ್ತದೆ.

ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು ಆದ್ದರಿಂದ ಆರೋಗ್ಯಕರ ಸಮಾಗಮಕ್ಕೆ ಆರೋಗ್ಯಕರ ಉದ್ರೇಕವೂ ಅಗತ್ಯ. ಇಂದಿನ ದಿನಗಳಲ್ಲಿ ಉದ್ರೇಕತೆಯ ತೊಂದರೆಯಿಂದ ಹಲವು ದಂಪತಿಗಳ ನಡುವೆ ವಿರಸ ಹೊಗೆಯಾಡುತ್ತಿದ್ದು ಹಲವು ಜೋಡಿಗಳು ಬೇರೆಯೂ ಆಗಿವೆ. ಲೈಂಗಿಕ ಶಕ್ತಿ ಹೆಚ್ಚಿಸುವ ಈ ವಿಧಾನಗಳನ್ನು ಅನುಸರಿಸಿ….

ಒಂದು ದೊಡ್ಡಚಮಚ ಜೇನನ್ನು ನಿಯಮಿತವಾಗಿ ಸೇವಿಸಿ, ಈ ವಿಧಾನ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದನ್ನು ಪುಷ್ಟೀಕರಿಸಲಾಗಿದೆ. ಈ ವಿಧಾನವನ್ನು ಅನುಸರಿಸುವ ಜೊತೆಗೇ ಧೂಮಪಾನ, ಮದ್ಯಪಾನಗಳನ್ನು ಬಿಡುವುದು, ಆರೋಗ್ಯಕರ ಆಹಾರ ಸೇವಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮವನ್ನೂ ಮಾಡುವುದು ಅಗತ್ಯವಾಗಿದೆ.

ಗೇರುಬೀಜದ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ, ಪ್ರೋಟೀನುಗಳಿದ್ದು ಪುರುಷಾಂಗಕ್ಕೆ ರಕ್ತಪರಿಚಲನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ಉದ್ರೇಕತೆ ಹೆಚ್ಚು ಹೊತ್ತು ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಸಹಾ ರಕ್ತಪರಿಚಲನೆಯನ್ನು ಹೆಚ್ಚಿಸಿ ಹೆಚ್ಚು ದೃಢತೆ ನೀಡಲು ನೆರವಾಗುತ್ತದೆ. ಗೋಡಂಬಿ-ಜೇನಿನ ಮಿಶ್ರಣವನ್ನು ಪ್ರತಿದಿನ ರಾತ್ರಿ ಊಟದ ಬಳಿಕ ಎರಡು ತಿಂಗಳ ಕಾಲ ಸೇವಿಸಿ.