ಬೆಂಗಳೂರು: ಫೆ-13:(www.justkannada.in) ರಾಜಧಾನಿ ಬೆಂಗಳೂರು ನಗರದಲ್ಲಿ ಕೆಲವೇ ವರ್ಷಗಳಲ್ಲಿ ಜಲ ಸಂಕಟ ಎದುರಾಗಲಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ ಎಂಬ ಮಾಧ್ಯಮಗಳ ವರದಿಯಲ್ಲಿ ಮಾಹಿತಿ ಕೊರತೆಯಿದ್ದು, ಬೆಂಗಳೂರು ನಗರದಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗದು ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟಪಡಿಸಿದ್ದಾರೆ.

2030-31ಕ್ಕೆ ನಗರದ ಜನಸಂಖ್ಯೆ 2 ಕೋಟಿ ತಲುಪುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಹಾಗೂ ಇಷ್ಟು ಜನರಿಗೆ ನೀರು ಪೂರೈಸುವಷ್ಟು ಬೆಂಗಳೂರು ಜಲಮಂಡಳಿಗೆ ಸಾಮರ್ಥ್ಯ‌ವಿದೆ. ನಗರದಲ್ಲಿ ನೀರಿನ ಕೊರತೆ ಇಲ್ಲ ಎಂದು ವಿವರಿಸಿದ್ದಾರೆ.

Image result for NO WATER SHORTAGE IN CITY, SAYS KJ GEORGE

ನಗರದಲ್ಲಿ ನೀರಿನ ಕೊರತೆ ಇದೆ ಎಂದು ಮಾಧ್ಯಮದಲ್ಲಿ ಬಂದಿರುವ ವರದಿಯಲ್ಲಿ ಮಾಹಿತಿ ಕೊರತೆ ಇದೆ. 2014 ರ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾಡಿರುವ ವರದಿ ಇದಾಗಿದೆ. ಕಾವೇರಿ ನಾಲ್ಕು ಹಂತಗಳ ಯೋಜನೆಯಲ್ಲಿ ದಿನಕ್ಕೆ 1,400 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ಕಾವೇರಿ ಐದನೇ ಹಂತದ ಯೋಜನೆಯಲ್ಲಿ 2023 ರ ವೇಳೆಗೆ 775 ಎಂಎಲ್‌ಡಿ ನೀರು ದೊರೆಯಲಿದೆ. ಎತ್ತಿನಹೊಳೆಯಿಂದ ಸುಮಾರು 2 ಟಿಎಂಸಿ ನೀರು ಪಡೆಯಲಾಗುವುದು. ಇದರ ಜತೆಗೆ ಸಮುದ್ರದಲ್ಲಿ ಅಣೆಕಟ್ಟು ನಿರ್ಮಿಸಿ ನೀರು ಪಡೆಯುವ ಯೋಜನೆಯೂ ಚರ್ಚೆಯಾಗುತ್ತಿದೆ, ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಶರಾವತಿಯಲ್ಲಿ 1 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಉತ್ಪಾದನಾ ಪ್ರಮಾಣವನ್ನು 500 ಮೆಗಾ ವ್ಯಾಟ್‌ಗೆ ಇಳಿಸಿದರೆ ನಗರಕ್ಕೆ ಅಲ್ಲಿಂದ ನೀರು ಪೂರೈಕೆ ಮಾಡಬಹುದು. ಈ ಯೋಜನೆಯೂ ಸದ್ಯಕ್ಕೆ ಚರ್ಚೆ ಹಂತದಲ್ಲಿದೆ. ಸೋರಿಕೆಯಾಗುತ್ತಿದ್ದ ನೀರಿನ ಪ್ರಮಾಣವನ್ನು ಶೇ.49 ರಿಂದ ಶೇ.39 ಕ್ಕೆ ಇಳಿಸಲಾಗಿದೆ. 2025 ರ ವೇಳೆಗೆ ಅದನ್ನು ಶೇ.25 ಕ್ಕೆ ಇಳಿಸುವ ಗುರಿ ಇದೆ. ಇನ್ನು ಕಳೆದೆರಡು ವರ್ಷಗಳ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಅಂತಹ ಸಂಕಷ್ಟದ ಸನ್ನಿವೇಶದಲ್ಲೂ ನಗರಕ್ಕೆ ನೀರು ಕಡಿಮೆಯಾಗದಂತೆ ಎಚ್ಚರ ವಹಿಸಲಾಗಿತ್ತು. ಈ ಬಾರಿಯ ಬೇಸಿಗೆಗೆ ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯವಿದೆ. ನಗರದಲ್ಲಿ 2020ರ ವೇಳೆಗೆ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಪೂರ್ಣವಾಗಿ ಶುದ್ಧಗೊಳಿಸುವ ಎಸ್‌ಟಿಪಿಗಳನ್ನು ಜಲಮಂಡಳಿ ಹೊಂದಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರಕ್ಕೆ ನೀರಿನ ಕೊರತೆಯಿಲ್ಲ: ಆತಂಕಪಡುವ ಅಗತ್ಯವಿಲ್ಲ: ಕೆ.ಜೆ ಜಾರ್ಜ್ ಸ್ಪಷ್ಟನೆ
NO WATER SHORTAGE, IN CITY, KJ GEORGE

In what are surely symptoms of the election year, the energy department has promised that there won’t be many power cuts this year while BWSSB says that the water supply this year will be ‘normal’.BBMP said that it will go to any extent to ensure proper supply of water, even if it means drawing water from Sharavati river which flows 300 km away from the city.