ಯತೀಂದ್ರ ವಿರುದ್ದದ ಆರೋಪಕ್ಕೆ ಯಾವುದೇ ಹುರುಳಿಲ್ಲ; ಸೋಲುವ ಭೀತಿಯಲ್ಲಿ ಬಿಜೆಪಿಯಿಂದ ಆಧಾರ ರಹಿತ ಆರೋಪ-ಸಚಿವ ಹೆಚ್.ಸಿ ಮಹದೇವಪ್ಪ…

0
218
no point –allegation- against –Yatindra-BJP - Minister HC Mahadevappa

ಮೈಸೂರು,ಅ,12,2017(www.justkannada.in):  ಬಿಜೆಪಿಯವರು ಸಿಎಂ ಪುತ್ರ ಯತೀಂದ್ರ ಅವರ ವಿರುದ್ದ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸೋಲುವ ಭೀತಿಯಲ್ಲಿ ಬಿಜೆಪಿ ನಾಯಕರು ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದರು.no point –allegation- against –Yatindra-BJP - Minister HC Mahadevappa

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಿಎಂ ಸಿದ್ದರಾಮಯ್ಯ ಹಾಗೂ ಯತೀಂದ್ರ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿಯುವರು ಸುಮ್ಮನೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.ಯತೀಂದ್ರ ವೈದ್ಯರು, ಅವರಿಗೆ ಸಾರ್ವಜನಿಕ ಜೀವನದಲ್ಲಿ ಆಸಕ್ತಿ ಇರಲಿಲ್ಲ. ಯತೀಂದ್ರರ ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕೆತರಲು ಯತ್ನಿಸಲಾಗುತ್ತಿದೆ. ಇದು ರಾಜಕಾರಣದ ಬೌದ್ಧಿಕ ಅಧಃಪತನ.  ಸಮಯ ಸಾಧಕ ರಾಜಕಾರಣಿಗಳಿಗೆ ಜನತೆ ತಕ್ಕಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಸಿ ಎಂ ವಿರುದ್ದ ವಿರೋದಿಗಳು ಹೆಚ್ಚಾದಂತೆಲ್ಲಾ ಅವರ ಶಕ್ತಿ ಹೆಚ್ಚುತ್ತಲೆ ಇದೆ……

ಸಿದ್ದರಾಮಯ್ಯ ವಿರುದ್ದ ಶ್ರೀನಿವಾಸ್ ಪ್ರಸಾದ್ ,ಜಿ ಟಿ ಡಿ ಹಾಗೂ ವಿಶ್ವನಾಥ್ ಒಂದಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಹಿಂದೆಯಿಂದಲೂ ಇದೇ ರೀತಿ ನಡೆದುಕೊಂಡು ಬಂದಿದೆ. ಚಾಮುಂಡೇಶ್ವರಿ ಬೈ ಎಲೆಕ್ಷನ್ ನಲ್ಲಿ ಎಲ್ಲಾ ದುಷ್ಟಶಕ್ತಿಗಳು ಸೇರಿ ಸಿದ್ದರಾಮಯ್ಯ ಸೋಲಿಸಲು ನಿಂತಿದ್ರು. ಆದ್ರೆ ಕ್ಷೇತ್ರದ ಜನ ಕೈ ಹಿಡಿದಿದ್ರು. ಈ ಭಾರಿಯೂ ಕೂಡ ಜನ ಸಿ ಎಂ ಕೈ ಹಿಡಿಯಲಿದ್ದಾರೆ. ಈ ರೀತಿ ಸಿ ಎಂ ವಿರುದ್ದ ವಿರೋದಿಗಳು ಹೆಚ್ಚಾದಂತೆಲ್ಲಾ ಅವರ ಶಕ್ತಿ ಹೆಚ್ಚುತ್ತಲೆ ಇದೆ

ತಾರಾತುರಿಯಲ್ಲಿ  ಸಾಹಿತ್ಯ ಸಮ್ಮೆಳನ ಆಯೋಜನೆ ವಿಚಾರ. ನಿಗದಿತ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲಾ. ಅದರ ಬಗ್ಗೆ ಮಾತಾಡೋರು ಕೂಡ ಭಾಗವಹಿಸಿ ಕನ್ನಡದ ಕಂಪನ್ನ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯುವ ಆಶಾಭಾವ ಇದೆ ಎಂದು ಸಚಿವ ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Key words: no point –allegation- against –Yatindra-BJP – Minister HC Mahadevappa.