ಫೇಸ್’ಬುಕ್ ಪ್ರೊಫೈಲ್ ಫೋಟೋ ದುರ್ಬಳಕೆ ತಡೆಗೆ ಹೊಸ ಟೂಲ್!

0
6883

ಲಾಸ್‌ ಏಂಜಲೀಸ್‌, ಜೂನ್ 01 (www.justkannada.in): ಫೇಸ್‌ಬುಕ್‌ ಭಾರತದಲ್ಲಿ ಹೊಸ ಟೂಲ್‌ ಒಂದನ್ನು ಪರಿಚಯಿಸಿದೆ. ಫೇಸ್‌ಬುಕ್‌ನಲ್ಲಿ ಹಾಕಲಾದ ಪ್ರೊಫೈಲ್‌ ಫೋಟೋಗಳನ್ನು ಡೌನ್‌ಲೋಡ್‌ ಮಾಡಿಕೊಂಡು ದುರ್ಬಳಕೆ ಮಾಡುವುದಕ್ಕೆ ಈ ಟೂಲ್ ಕಡಿವಾಣ ಹಾಕಲಿದೆ.

ಈ ಟೂಲ್‌ ಮುಖಾಂತರ ಫೇಸ್‌ಬುಕ್‌ ಬಳಕೆದಾರರಿಗೆ ತಮ್ಮ ಪ್ರೊಫೈಲ್‌ ಫೋಟೊಗಳನ್ನು ರಕ್ಷಿಸಿಕೊಳ್ಳುವ ಅವಕಾಶ ಒದಗಿಸಲಾಗಿದೆ. ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಪ್ರತಿಯೊಬ್ಬರಿಗೂ ತಮ್ಮ ಪ್ರೊಫೈಲ್‌ ಚಿತ್ರಗಳನ್ನು ಹಂಚಿಕೊಳ್ಳುವುದು ಸುರಕ್ಷಿತವೆನಿಸುವುದಿಲ್ಲ, ಹೀಗಾಗಿ ಅವರು ತಮ್ಮ ಚಿತ್ರಗಳನ್ನು ಹಂಚಿಕೊಳ್ಳುವುದಿಲ್ಲ.

ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡುವುದರಿಂದ ಸಮಸ್ಯೆ ಉದ್ಭವವಾಗಬಹುದೆಂದು ಭಾವಿಸಿ, ಕೆಲವು ಮಹಿಳೆಯರು ತಮ್ಮ ಫೋಟೊಗಳನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳುವುದಿಲ್ಲ ಎಂಬ ಅಂಶ ಫೇಸ್‌ಬುಕ್‌ ಸಂಶೋಧನಕಾರರು ಪತ್ತೆಹಚ್ಚಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರೊಫೈಲ್‌ ಚಿತ್ರ ಗಾರ್ಡ್‌ ಅನ್ನು ಅಳವಡಿಸುವ ಆಯ್ಕೆಯಿದೆ. ಅದರಲ್ಲಿ ನೀಡಲಾಗುವ ಸೂಚನೆಯನುಸಾರ ಪ್ರೊಫೈಲ್‌ ಚಿತ್ರ ಗಾರ್ಡ್‌ ಅಳವಡಿಸಿದಲ್ಲಿ, ಯಾರೊಬ್ಬರಿಗೂ ಆ ಚಿತ್ರಗಳನ್ನು ಡೌನ್‌ಲೋಡ್‌, ಶೇರ್‌ ಅಥವಾ ಕಳುಹಿಸಲು ಸಾಧ್ಯವಾಗುವುದಿಲ್ಲ.