ನಮಗೆ ಪ್ರಜಾಕೀಯ, ಪ್ರಜಾಕಾರಣ, ಪ್ರಜಾಪ್ರಭುತ್ವ ಬೇಕಾಗಿದೆ:ಬನ್ನಿ ಎಲ್ಲರೂ ಸೇರಿ ಹೊಸ ಇತಿಹಾಸ ನಿರ್ಮಿಸೋಣ- ಹೊಸ ಪಕ್ಷ ಕಟ್ಟುವ ಬಗ್ಗೆ ನಿರ್ಧರಿಸಿದ ನಟ ಉಪೇಂದ್ರ….

0
2904
need -democracy-come -create a new history -build - new party-actor upendra

ಬೆಂಗಳೂರು,ಆ,12,2017(www.justkannada.in): ನಮಗೆ ಜನನಾಯಕ ಜನ ಸೇವಕ ಬೇಕಾಗಿಲ್ಲ.ಪ್ರಜಾಕೀಯ, ಪ್ರಜಾಕಾರಣ, ಪ್ರಜಾಪ್ರಭುತ್ವ ಅಗತ್ಯವಿದ್ದು, ಬನ್ನಿ ಎಲ್ಲರೂ ಸೇರಿ ಹೊಸ ಇತಿಹಾಸ ನಿರ್ಮಿಸೊಣ ಎಂದು ನಟ ರಿಯಲ್ ಸ್ಟಾರ್ ಉಪೇಂದ್ರ ಕರೆ ನೀಡಿದರು.need -democracy-come -create a new history -build - new party-actor upendra

ರಾಜಕೀಯ ಪ್ರವೇಶ ಹಿನ್ನೆಲೆ ಶನಿವಾರ ಬಿಡದಿಯ ರುಪ್ಪೀಸ್ ರೆಸಾರ್ಟ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ, ಮಾತನಾಡಿದ ಉಪೇಂದ್ರ ಅವರು, ನಾನು ನಾಯಕನೂ ಅಲ್ಲ, ಸೇವಕನೂ ಅಲ್ಲ, ನಾನು ಕಾರ್ಮಿಕ.ನಾನು ಸ್ವ ಇಚ್ಛೆಯಿಂದ ಪ್ರಜಾಕೀಯ ಪಕ್ಷ ಕಟ್ಟುತ್ತಿದ್ದೇನೆ. ಇದಕ್ಕೆ ಇ ಮೇಲ್ ಐಡಿಗಳಿಗೆ ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಿಕೊಡಿ. ರಾಜಕಾರಣಿಯಾಗಬೇಕಾದರೆ ಮೊದಲು ಅರ್ಹತೆ ಮುಖ್ಯ. ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ. ಆದರೆ ಜಾತಿ, ಧರ್ಮ, ದುಡ್ಡು, ಫೇಮಸ್ ಇರುವವರಿಗೆ ವೋಟ್ ಹಾಕಲಾಗುತ್ತಿದೆ. ದುಡ್ಡು, ತೋಳ್ಬಲದಿಂದ ರಾಜಕೀಯ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯ ನಮಗೆ ಬೇಕಾಗಿಲ್ಲ. ಕೆಳಮಟ್ಟದಿಂದ ಬದಲಾವಣೆ ತರಬೇಕಾಗಿದೆ. ಸ್ವಚ್ಛ ಭಾರತದಂತೆ ಸ್ವಚ್ಛ ಆಡಳಿತ ನನ್ನ ಉದ್ದೇಶ. ದೇಶದಲ್ಲಿ ಪಾರದರ್ಶಕ ಸರ್ಕಾರ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾತಿ, ದುಡ್ಡು, ಹಣ, ಧರ್ಮ ನೋಡಿ ಮತ ಹಾಕ್ಬೇಕಾ?….

ಈಗ ಸಮಾವೇಶಗಳನ್ನ ನಡೆಸುತ್ತಾರೆ. ಒಂದು ಕಾಲದಲ್ಲಿ ಇಷ್ಟೊಂದು ಟಿವಿ ಚಾನಲ್ ಗಳು ಇರಲಿಲ್ಲ. ಅಂದು ರ್ಯಾಲಿ ಮಾಡಿ ಭಾಷಣ ಮಾಡುವ ಪರಿಸ್ಥಿತಿ ಇತ್ತು. ಆದ್ರೆ ಈಗ ರ್ಯಾಲಿ ಮಾಡಿ ಅದನ್ನೇ ಟಿವಿಯಲ್ಲಿ ನೋಡ್ಬೇಕಾ? ಜಾತಿ,ದುಡ್ಡು,ಹಣ ಧರ್ಮ ನೋಡಿ ಮತ ಹಾಕಬೇಕಾ? ಎಂದು ಪ್ರಶ್ನಿಸಿದ ನಟ ಉಪೇಂದ್ರ,ಅವರಿಗೆ ಕೆಲಸ ಮಾಡುವ ತಾಕತ್ತಿದ್ಯಾ ಅಂತ ನೋಡಿ ಮತ ನೀಡಬೇಕು. ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಜಾತಿ ನೋಡ್ತೇವಾ? ಅದಕ್ಕಾಗಿ ಸಮರ್ಥರು ಮಾತ್ರ ಶಾಸಕರು, ಸಂಸದರು ಆಗಿ ಆಯ್ಕೆಯಾಗಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ….

ನಮ್ಮ ದೇಶದಲ್ಲಿರುವುದು ಪ್ರಜಾಪ್ರಭುತ್ವ ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ. ನಮಗೆ ಸೇವೆ ಬೇಡ, ಜನನಾಯಕ ಬೇಡ,ಸೇವಕ ಬೇಡ. ಪಾರದರ್ಶಕವಾಗಿ ದುಡಿಯುವ ಕಾರ್ಮಿಕ ಬೇಕು ಎಂದು ಹೇಳಿದರು.

ಎಲ್ಲರೂ ಪ್ರತಿವರ್ಷ ಜನರು ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಾರೆ. ನಮ್ಮ ಬಜೆಟ್ ಆಗೋದೆ ಅದ್ರಿಂದ. . ಜನ ಕೊಡ್ತಿರೋ ತೆರಿಗೆ ಸಮರ್ಪಕವಾಗಿ ಖರ್ಚಾಗಬೇಕು. ನನ್ನ ಪ್ರಕಾರ ಜನರು ಶ್ರೀಸಾಮಾನ್ಯರಲ್ಲ, ನನ್ನ ಪ್ರಕಾರ ಅಸಾಮಾನ್ಯರು ಜನರ ದುಡ್ಡು ಎಲ್ಲೂ ಪೋಲಾಗದೆ ಖರ್ಚಾಗಬೇಕು ಎಂದರು.

ನಾನು ಕೆಲಸಗಾರ ಅದಕ್ಕಾಗಿ ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ನನ್ನ ಪಕ್ಷಕ್ಕೆ ಬರುವವರು, ಸ್ವ ವಿವರ ಕಳುಹಿಸಿ (ಇ ಮೇಲ್ ಐಡಿ: Prajakarana1@gmail.com, Prajakarana2@gmail.com, prajakarana3@gmail.com) ನಿಮ್ಮೊಂದಿಗೆ ಚರ್ಚಿಸಿಯೇ ನಾನು ಮುಂದುವರಿಯುತ್ತೇನೆ. ಸೋಲು ಗೆಲುವು ಮುಖ್ಯವಲ್ಲ. ಪ್ರಯತ್ಬ ನಾಡುತ್ತೇವೆ ಎಂದು ತಿಳಿಸಿದರು.

ಇರುವ ಕಮಿಟ್ ಮೆಂಟ್ ಮುಗಿಸಿದ ಬಳಿಕ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗುವೆ.

ನಾನು ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದೇನೆ. ಆದರೆ ಹೊಸ ಪಕ್ಷದ ಹೆಸರೇನು? ಅದರ ಚಿಹ್ನೆ ಏನು ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ. ಇರುವ ಕಮಿಟ್ ಮೆಂಟ್ ಮುಗಿಸಿದ ಬಳಿಕ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತೇನೆ. ಎಲ್ಲರ ಜತೆ ಚರ್ಚೆ ಮಾಡಿ ಪಕ್ಷಕ್ಕೆ ಹೆಸರು ಇಡಲಾಗುತ್ತದೆ. ಚುನಾವಣಾ ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ನಟ ಉಪೇಂದ್ರ ಹೇಳಿದರು.

key words: need -democracy-come -create a new history -build – new party-actor upendra