ರಾಷ್ಟ್ರಪತಿ ಚುನಾವಣೆ ಯಲ್ಲಿ ಎನ್ ಡಿ ಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆಲುವು ನಿಶ್ಚಿತ- ಬಿಜೆಪಿ ಶಾಸಕ ಸಿಟಿ ರವಿ ವಿಶ್ವಾಸ…

0
459
NDA candidate- Ramnath Kovind -win - presidential election- CT Ravi

ಬೆಂಗಳೂರು,ಜು,17,2017(www.justkannada.in): ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆಲುವು ನಿಶ್ಚಿತ  ಎಂದು ಬಿಜೆಪಿ ಶಾಸಕ ಸಿಟಿ ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.NDA candidate- Ramnath Kovind -win - presidential election- CT Ravi

ವಿಧಾನಸೌಧಲ್ಲಿ ಇಂದು ಮಾತನಾಡಿದ  ಶಾಸಕ ಸಿಟಿ ರವಿ, ಕೋವಿಂದ್ ಅವರಿಗೆ ಎನ್ ಡಿಎ ಅಲ್ಲದೆ ಜೆಡಿಯು,ವೈಎಸ್ ಆರ್, ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ದಲಿತ ಅಭ್ಯರ್ಥಿಯನ್ನ ಹಾಕಿ, ದಲಿತರನ್ನೇ ಒಡೆಯಲು ಮುಂದಾಗಿದೆ

ಕಾಂಗ್ರೆಸ್ ದಲಿತ ಅಭ್ಯರ್ಥಿಯನ್ನ ಹಾಕಿದ್ದು ದುರದೃಷ್ಟಕರ. ಎನ್ ಡಿಎ ಅಭ್ಯರ್ಥಿಗೆ ಶೇ.63ರಷ್ಟು ಬೆಂಬಲ ಸಿಕ್ಕಿದೆ. ಹಲವು ಪಕ್ಷೇತರರು ನಮಗೆ ಬೆಂಬಲ ಸೂಚಿಸಿದ್ದಾರೆ  ಎಂದು ಹೇಳಿದರು.

ಕೆಟ್ಟಿರೋದು ಜೈಲ್ ಅಲ್ಲ, ಸರ್ಕಾರ…

ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಕೆಟ್ಟಿರೋದು ಜೈಲ್ ಅಲ್ಲ, ಸರ್ಕಾರವೇ ಕೆಟ್ಟು ಹೋಗಿದೆ. ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನ ಮಾಡುತ್ತಿದ್ದಾರೆ. 46 ಫೈಲ್ ಗಳು ದೂಳು ಹಿಡಿದಿವೆ. ಅಂತಹ ಅಧಿಕಾರಿಗಳನ್ನು ಇಲಾಖೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕಿಡಿ ಕಾರಿದರು.

ಮೋಡ ಭಿತ್ತನೆ ವಿಚಾರ ಸಂಬಂಧ ವೈಜ್ಞಾನಿಕವಾಗಿ ಮೋಡ ಭಿತ್ತನೆ ಅವಶ್ಯಕತೆ ಇಲ್ಲ. ದುಡ್ಡು ಹೊಡಿಯೋಕೆ ಈ ಕೆಲಸ ಮಾಡುತ್ತಿದ್ದಾರೆ. ಮೋಡವೇ ಇಲ್ಲ ಎಲ್ಲಿಂದ ಮೋಡ ಭಿತ್ತನೆ ಮಾಡುತ್ತಾರೆ. ಮೋಡ ಭಿತ್ತನೆ ಮಾಡಿ ಮಳೆ ಬರಿಸಲಿ ಇವರಿಗೆ ನೋಬಲ್ ಪ್ರಶಸ್ತಿಯನ್ನು ಕೊಡುಸುತ್ತೇನೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದರು.

Key words: NDA candidate- Ramnath Kovind -win – presidential election- CT Ravi