ಬೆಂಗಳೂರು,ಏ,21,2017(www.justkannada.in): ಮುಂದೆಯು ನಾನೇ ಸಿಎಂ ಆಗುವೆ  ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೆ ಇವರ ಪರ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಬ್ಯಾಟ್ ಬೀಸಿದ್ದಾರೆ. ಸ್ವಾಭಾವಿಕವಾಗಿ ಮುಮದೆಯೂ ಸಹ ಅವರೇ ಸಿಎಂ ಆಗುತ್ತಾರೆ ಎಂದು  ಸಚಿವ ಎಂಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಎಂ. ಬಿ ಪಾಟೀಲ್ , ಸಿಎಂ ಸಿದ್ದರಾಮಯ್ಯ  ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತಿರುವುದರಿಂದ ಸ್ವಾಭಾವಿಕವಾಗಿ ಮುಂದೆಯು ಅವ್ರೆ ಸಿಎಂ ಆಗುತ್ತಾರೆ.ಸಿಎಂ ಸಿದ್ದರಾಮಯ್ಯ  ಮುಂದಿನ ಅವಧಿಗೂ ಸಿಎಂ ಆಗೋದು ಬಹುತೇಕ ಎಲ್ಲರೂ ಒಪ್ಪುತ್ತಾರೆ ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ ನಾವು ಎದುರಿಸುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸಿಗ ಹಾಗು ವಲಸಿಗ ಕಾಂಗ್ರೆಸಿಗ ಅಂತೇನೂ ಇಲ್ಲ.ನಮ್ಮ ಪಕ್ಷದಿಂದ ಅವರು ಸಿಎಂ ಆದ್ಮೇಲೆ ಮೂಲ ಕಾಂಗ್ರೆಸಿಗ ಹಾಗೂ ವಲಸಿಗ ಕಾಂಗ್ರೆಸ್ ಅನ್ನೋ ವಿಚಾರ ಬರುವುದಿಲ್ಲ.ಅಂತಿಮವಾಗಿ ಸಿಎಂ ಯಾರು ಆಗಬೇಕು ಅನ್ನೋದನ್ನ ಹೈಕಮಾಂಡ್ ಹಾಗೂ ಶಾಸಕಾಂಗ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದು ತಿಳಿಸಿದರು.

Key words: Naturall- chief minister- CM Siddaramaiah- Minister MB Patil -batting …