ಮೈಸೂರು, ಫೆ.13, 2018 : (www.justkannada.in news ) ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮೈಸೂರಿಗೆ ಆಗಮಿಸುತ್ತಿದ್ದಾರೆ.

 narendra-modi-mysore-visit-prathap-simha-mp-train-railway

ಇದೇ 19 ರಂದು ವಿವಿಧ ವಿವಿದ ಕಾಮಗಾರಿಗಳ ಲೋಕಾರ್ಪಣೆ ಹಾಗೂ ವಿವಿದ ಕಾಮಗಾರಿಗಳ ಉದ್ಘಾಟನೆ ಹಾಗೂ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ರ್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸುವರು. ಈ ಹಿಂದೆ 2013 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಚಾರಕ್ಕೆ ಮೋದಿ ಮೈಸೂರಿಗೆ ಆಗಮಿಸಿದ್ದರು.

ಮೋದಿ ಆಗಮನದ ಹಿನ್ನೆಲೆಯಲ್ಲಿ ಮಂಗಳವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದ ವೇಧಿಕೆಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಮಹಾರಾಜ ಕಾಲೇಜು ಮೈದಾನದ ಈಶಾನ್ಯ ಮೂಲೆಯಲ್ಲಿ ವೇಧಿಕೆಯ ಗುದ್ದಲಿ ಪೂಜೆ ನಡೆಸಲಾಯಿತು.

 narendra-modi-mysore-visit-prathap-simha-mp-train-railway

ಈ ವೇಳೆ ಸಂಸದ ಪ್ರತಾಪ್ ಸಿಂಹ, ಡಾ ಮಂಜುನಾಥ್, ರಾಜ್ಯ ಹಿಂದುಳಿದ ಘಟಕದ ಅಧ್ಯಕ್ಷ ಅರವಿಂದ ಲಿಂಭಾವಳಿ, ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ಸೇರಿದಂತೆ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

ಪ್ರಧಾನಿ ಏನು ಮಾಡುವರು :

ಬೆಂಗಳೂರು- ಮೈಸೂರು ಜೋಡಿ ಹಳಿ ರೈಲು ಮಾರ್ಗಕ್ಕೆ ಚಾಲನೆ.
ಮೈಸೂರು ಮತ್ತು ರಾಜಸ್ಥಾನ ಮಾರ್ಗವಾಗಿ ಚಲಿಸಲಿರುವ ಹಂ ಸಫರ್ ರೈಲು ಸಂಚಾರಕ್ಕೆ ಚಾಲನೆ.
ನಾಗನಹಳ್ಳಿಯ ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ಹೊಸ ರೈಲು ನಿಲ್ದಾಣ ಮತ್ತು ಟರ್ಮಿನಲ್ ನಿರ್ಮಾಣಕ್ಕೆ ಚಾಲನೆ.

 

Tags : narendra-modi-mysore-visit-prathap-simha-mp-train-railway