ಮೈಸೂರು,ಮಾ,20,2017(www.justkannada.in): ನಂಜನಗೂಡು  ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳಲೆ ಕೇಶವಮೂರ್ತಿ ಇಂದು ನಾಮಪತ್ರ ಸಲ್ಲಿಸಿದರು.

ಕಳಲೆ ಕೇಶವಮೂರ್ತಿ ಅವರು ನಾಮಪತ್ರ ಸಲ್ಲಿಸುವಾಗ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಎಚ್.ಸಿ. ಮಹದೇವಪ್ಪ, ಸಂಸದ ಧ್ರುವನಾರಾಯಣ್ ಸಾಥ್  ನೀಡಿದರು.

ಪಟ್ಟಣ ರಾಷ್ಟ್ರಪತಿರಸ್ತೆಯ ಬಳಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರನ್ನ ಬೆಂಬಲಿಸಿ ಸಾವಿರಾರು ಜನರ ಆಗಮಿಸಿದ್ದರು.  ಸಾವಿರಾರು ಬೆಂಬಬಲಿಗರೊಂದಿಗೆ ಮೆರವಣಿಗೆ ಮೂಲಕ ಸಾಗಿ ಕಳಲೆ ಕೇಶವ ಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ.

ಹೆಚ್ ಡಿ ದೇವೇಗೌಡ ನಮ್ಮ ನಾಯಕರು. ಕೋಮುವಾದಿ ಶಕ್ತಿ ದೂರವಿಡಲು ಜೆಡಿಎಸ್ ಅಭ್ಯರ್ಥಿ ಹಾಕಿಲ್ಲ- ಹೆಚ್.ಸಿ ಮಹದೇವಪ್ಪ……

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಹೆಚ್ ಡಿ ದೇವೇಗೌಡ ನಮ್ಮ ನಾಯಕರು. ಕೋಮುವಾದಿ ಶಕ್ತಿಗಳನ್ನ ದೂರವಿಡಲು ಅವರು ಜೆಡಿಎಸ್ ನಿಂದ ಅಭ್ಯರ್ಥಿ ಕಣಕ್ಕಿಳಿಸಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು

ಹಾಗೆಯೇ ಕಾರ್ಯಕರ್ತರ ಅಭೂತಪೂರ್ವ ಬೆಂಬಲನೋಡಿ ಸಂತಷವಾಗಿದೆ . ಪಂಜರದ ಗಿಳಿಯಾಗಿದ್ದ ನಂಜನಗೂಡಿನ ಜನ ಈಗ ಹೊರಬಂದು ಕಳಲೆ ಕೇಶವ ಮೂರ್ತಿ ಅವರಿಗೆ ಬೆಂಬಲ ನೀಡಿದ್ದಾರೆ. ಬೆಂಕಿ ಮಹದೇವ್ ಅವರ ಪತ್ನಿ ನಮಗೆ ಬೆಂಬಲ ನೀಡುವ ವಿಶ್ವಾಸಿದೆ. ಈ ಹಿಂದೆ ಬೆಂಕಿ ಮಹದೇವ್ ಅವರು ಸ್ನೇಹಪರ ರಾಜಕಾರಣ ಮಾಡಿಕೊಂಡು ಬಂದಿದ್ದರು. ನಂಜನಗೂಡು ತಾಲೂಕಿನ ಎಲ್ಲಾ ಸಮುದಾಯದ ಜನ ವ್ಯಾಪಕ ಬೆಂಬಲ ಸೂಚಿಸಿದ್ದಾರೆ ಎಂದು ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಜೆ ಡಿಎಸ್ ಜಿಲ್ಲಾಧ್ಯಕ್ಷರನ್ನ ಭೇಟಿ ಮಾಡಿದ್ದು ನಿಜ. ಅವರು ಕೊಮುವಾದಿ ಪಕ್ಷವನ್ನ ದೂರಿಡುತ್ತಾರೆ  ಎಂದು ಪರೋಕ್ಷವಾಗಿ ಜೆಡಿಎಸ್ ಬೆಂಬಲ ನೀಡುತ್ತಿರುವ ವಿಚಾರವನ್ನ ಹೆಚ್.ಸಿ ಮಹದೇವಪ್ಪ ಹೊರಹಾಕಿದರು.

Key words: Nanjangud -by elections- kalele  kesavamurti -filed nomination