ಮೈಸೂರು,ಮಾ,20,2017(www.justkannada.in): ನಂಜನಗೂಡು ಉಪಚುನಾವಣೆ ಕಣ ರಂಗೇರುತ್ತಿದ್ದು, ಇದು ಸ್ವಾಭಿಮಾನ ಮತ್ತು ದುರಹಂಕಾರದ ನಡುವಿನ ಹೋರಾಟ. ಇಲ್ಲಿ ಗೆಲವು ನಮ್ಮದೆ ಎಂದು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ನಂಜನಗೂಡು ಪಟ್ಟಣದಲ್ಲಿ ಅಪಾರ ಬೆಂಬಲಿಗರ ಜೊತೆ ಶ್ರೀನಿವಾಸ ಪ್ರಸಾದ್ ತೆರೆದ ವಾಹನದಲ್ಲಿ ತೆರಳಿ,ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಯಾದ ಬಳಿಕ ಮಾತನಾಡಿದ  ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್ ಸ್ವಾಭಿಮಾನ ಮತ್ತು ದುರಂಹಂಕಾರದ ನಡುವಿನ ಹೋರಾಟವಿದು. ಸಿಎಂ ಸಿದ್ದರಾಮಯ್ಯ ಅವರ ದುರಂಹಂಕಾರದ ಮಾತುಗಳನ್ನ ಜನ ನೋಡಿದ್ದಾರೆ. ಉತ್ತರ ಪ್ರದೇಶದ ನೂತನ ಸಿಎಂ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ ಕನಿಷ್ಠ ಸೌಜನ್ಯತೆಯನ್ನು ತೋರಿಸಿಲ್ಲ ಎಂದು ಗುಡುಗಿದರು.

ಈ ನಡುವೆ ಉಪ ಚುನಾವಣೆಯಲ್ಲಿ ಇಂದು ನಾನು ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದ ಜನರಿಂದ ಅತ್ಯದ್ಭುತ ಪ್ರೀತಿ ವಿಶ್ವಾಸ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.

Key words: Nanjangud- by-election; -self-esteem -arrogance –v. srinivas Prasad