ನಂಜನಗೂಡು ಉಪಚುನಾವಣೆ: ಗಣಪತಿ ದೇವಾಲಯಕ್ಕೆ ಪೂಜೆ ಸಲ್ಲಿಸಿದ ‘ಕೈ’ಅಭ್ಯರ್ಥಿ ಕಳಲೆ ಕೇಶವಮೂರ್ತಿ; ಇಂದು ನಾಮಪತ್ರ ಸಲ್ಲಿಕೆ..

0
260
Nanjangud- by-election- Ganapati temple- worship-kalale keshavamurti

ಮೈಸೂರು,ಮಾ,20,2017(www.justkannada.in): ನಂಜನಗೂಡು ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ರಾಷ್ಟ್ರ ಪತಿರಸ್ತೆಯಲ್ಲಿರುವ ಗಣೇಶ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಾಮ ಪತ್ರ ಸಲ್ಲಿಸಲು ಹೊರಟಿದ್ದಾರೆ.

ಪಟ್ಟಣದ ರಾಷ್ಟ್ರಪತಿರಸ್ತೆಯ ಬಳಿ  ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಸಾವಿರಾರು ಜನರ ಆಗಮಿಸಿದ್ದು ಸಾವಿರಾರುಬೆಂಬಬಲಿಗರೊಂದಿಗೆ ಮೆರವಣಿಗೆ ಮೂಲಕ ಸಾಗಿ ಕಳಲೆ ಕೇಶವ ಮೂರ್ತಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.

ಇನ್ನು 120 ಖಾಸಗಿ ಬಸ್ ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದು, ಜಿಲ್ಲಾ ಉಸ್ತುವಾರಿಸಚಿವ ಡಾ ಹೆಚ್ ಸಿ ಮಹದೇವಪ್ಪ ,ಸಂಸದ ದ್ರುವನಾರಾಯಣ್, ಸತೀಶ್ ಜಾರಕಿಹೊಳಿ , ಶಾಸಕರಾದ  ವಾಸು, ರಿಜ್ವಾನ್ ಅರ್ಶದ್ ಸೇರಿ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.

Key words: Nanjangud- by-election- Ganapati temple- worship-kalale  keshavamurti