ಬೆಳಗಾವಿ,ಫೆಬ್ರವರಿ 13,2018(www.justkannada.in):  ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ  ಒಂದು ಕಡೆ ಮಾಧ್ಯಮಗಳು ಮತ್ತಿತರ ಸಂಸ್ಥೆಗಳ ಸಮೀಕ್ಷೆ ನಡೆಸುತ್ತಿದ್ದರೇ ಇನ್ನೊಂದೆಡೆ ನಾಗಾ ಸಾಧುಗಳು ನುಡಿಯುತ್ತಿರುವ ಭವಿಷ್ಯ. ರಾಜ್ಯ ವಿಧಾನಸಭಾ ಚುನಾವಣೆ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ.nagasadhu-visited-shivaratri-expected-future-assembly-elections

ಇಂದು  ಶಿವರಾತ್ರಿಯ ಸಂಭ್ರಮವಾಗಿದ್ದು, ಬೆಳಗಾವಿಯ ಹುಕ್ಕೇರಿಯ ಹಿರೇಮಠಕ್ಕೆ ಭೇಟಿ ನೀಡಿದ ನಾಗಾ ಸಾಧುಗಳು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬಳಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ ಹೇಗೆ ಅದ್ಭುತವಾದ ಜಯ ಸಾಧಿಸಿತೋ ಅದೇ ರೀತಿ ಕರ್ನಾಟಕದಲ್ಲೂ ಸಾಧನೆ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ ಎನ್ನಲಾಗುತ್ತಿದೆ.nagasadhu-visited-shivaratri-expected-future-assembly-elections

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಲಿದೆ ಎಂದು ನಾಗಸಾಧುಗಳು ಹೇಳುವ  ಮೂಲಕ ಮತ್ತೆ ಕುತೂಹಲ ಹೆಚ್ಚು ಮಾಡಿದ್ದಾರೆ.

ಇತ್ತೀಚೆಗಷ್ಟೆ ವಾರಣಾಸಿಯಿಂದ ದೇಶ ಸಂಚಾರ ಮಾಡಿಕೊಂಡು ಬಂದಿದ್ದ ಹದಿನೆಂಟು ನಾಗಾ ಸಾಧುಗಳು ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆ ಭೇಟಿ ನೀಡಿ, ಆಶೀರ್ವಾದ ಮಾಡಿ ಹೋಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಹರಡಿತ್ತು.

Key words: Nagasadhu- visited -Shivaratri – expected -future -Assembly elections.